Tue. Apr 15th, 2025

Belal: ನೇಣುಬಿಗಿದುಕೊಂಡು ಕೊರಗಪ್ಪ ಆತ್ಮಹತ್ಯೆ!!

ಬೆಳಾಲು:(ಎ.11) ವ್ಯಕ್ತಿಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.11 ರಂದು ಬೆಳಾಲಿನಲ್ಲಿ ನಡೆದಿದೆ.

ಬೆಳಾಲು ಗ್ರಾಮದ ನೆಕ್ಕಿಲಾಡಿ ನಿವಾಸಿ ಕೊರಗಪ್ಪ (43 ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಎ.10 ರಂದು ಕೊರಗಪ್ಪರವರ ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಎ.11 ರಂದು ಸಂಬಂಧಿಕರ ಮನೆಯಿಂದಲೇ ಪತ್ನಿ ಕೆಲಸಕ್ಕೆಂದು ತೆರಳಿದ್ದು, ಮಕ್ಕಳು ತಮ್ಮ ಮನೆಗೆ ಬಂದಿದ್ದಾರೆ. ಮಕ್ಕಳು ಮನೆಗೆ ಬಂದು ತಂದೆ ಕಾಣದಿರುವುದನ್ನು ಕಂಡು ಹುಡುಕಾಟವನ್ನು ನಡೆಸಿದ್ದಾರೆ. ತಂದೆಯ ಮೃತದೇಹವು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮನೆಯ ಸ್ನಾನದ ಕೊಠಡಿಯಲ್ಲಿ ಕಂಡು ಬಂದಿದೆ. ತಕ್ಷಣ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಧರ್ಮಸ್ಥಳ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಸಾವಿತ್ರಿ ಹಾಗೂ ಮಕ್ಕಳಾದ ಶಿವಕುಮಾರ್‌ , ದೀಕ್ಷಿತ್‌, ಅಂಕಿತ ಇವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *