ಬೆಳ್ತಂಗಡಿ:(ಎ.11) ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆ ಉತ್ಸವದ ಪ್ರಯುಕ್ತ ನಡ – ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ ನಡೆಯಿತು.

ದೇವಸ್ಥಾನ ದ ಜಾತ್ರೆ ಉತ್ಸವದ ಪ್ರಯುಕ್ತ ದೇವಸ್ಥಾನ ದ ಆಡಳಿತ ಮಂಡಳಿಯ ಮ್ಯಾನೇಜರ್ ಪ್ರಶಾಂತ್ ರವರ ಮನವಿಯ ಮೇರೆಗೆ ಶೌರ್ಯ ತಂಡದ ಸ್ವಯಂ ಸೇವಕರಾದ ಒಲ್ವಿನ್ ಡಿಸೋಜ, ಸುರೇಶ್, ರವೀಂದ್ರನಾಥ, ಜಯರಾಮ್ ಹರೀಶ್,ಜೀವನ್ ಡಿಸೋಜ ಲೀಲಾ, ಅರ್ವಿನ್ ಮಿರಾಂದ, ಸಂಯೋಜಕರಾದ ವಸಂತಿ, ಇವರೆಲ್ಲರೂ ಸೇರಿ ಬಹಳ ಶ್ರಮಪಟ್ಟು ಕೆಲಸ ನಿರ್ವಹಣೆ ಮಾಡಿದರು.


ಶ್ರೀ ದುರ್ಗಾ ಮಾತೆಯ ಸನ್ನಿಧಿಯಲ್ಲಿ ಸೇವೆಗೈದ ಎಲ್ಲರಿಗೂ ದೇವಸ್ಥಾನದ ಅರ್ಚಕರಾದ ಶ್ರೀಯುತ ಗಣೇಶ್ ಶರ್ಮಾ ರವರು ಇನ್ನೂ ಹೆಚ್ಚಿನ ಸೇವೆ ನೀಡುವ ಶಕ್ತಿಯನ್ನು ದುರ್ಗಾ ಮಾತೆ ನೀಡಲಿ ಎಂದು ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು. ದೇವಸ್ಥಾನ ದ ಆಡಳಿತ ಮೊಕ್ತೇಸರರಾದ ಧನಂಜಯ ಅಜ್ರಿ ,ಮ್ಯಾನೇಜರ್ ಪ್ರಶಾಂತ್ ರವರು ಎಲ್ಲರನ್ನು ಅಭಿನಂದಿಸಿ ಸ್ವಯಂ ಸೇವಕರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.


