ಉಜಿರೆ: (ಎ.14) ಪಡ್ಪು ಕನ್ಯಾಡಿ – 1 ಗ್ರಾಮದ ಶ್ರೀಮತಿ ಅಖಿಲ ಮತ್ತು ಶ್ರೀ ಅಶ್ವಥ್ ದಂಪತಿಗಳ ಪುತ್ರಿಯಾದ ಕುಮಾರಿ ಅದ್ವಿತಿ ರಾವ್ ಇವಳು ಡಿಸೆಂಬರ್ 1-2024ರಂದು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್ ಶೃಂಗೇರಿ ಇಲ್ಲಿ ಜಗದ್ಗುರುಗಳ ಸನ್ನಿಧಿಯಲ್ಲಿ ನಡೆದ ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕದ ಕಂಠಪಾಠ ಪರೀಕ್ಷೆ (ಗೀತಾ ಜ್ಞಾನ ಯಜ್ಞ) ಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದು,

ಇದನ್ನೂ ಓದಿ: ⭕ಬೆಳ್ತಂಗಡಿ : ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ
ಶೃಂಗೇರಿ ಜಗದ್ಗುರುಗಳ ಆಶೀರ್ವಾದವನ್ನು ಪಡೆದುದಕ್ಕಾಗಿ ಏಪ್ರಿಲ್ 10 ರಂದು ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಯುತ ಸತೀಶ್ಚಂದ್ರ ಜೈನ್ ಸುರ್ಯಗುತ್ತು,


ಸಂಗ್ರಾಮ್ ಸುರ್ಯಗುತ್ತು ಇವರು ದೇವರ ಸನ್ನಿಧಿಯಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಮಂಡಳಿಯ ಬಿ. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ನಾಭಿರಾಜ್ ಜೈನ್ ಉಪಸ್ಥಿತರಿದ್ದರು.


