ಬೆಳ್ತಂಗಡಿ:(ಎ.15) ಕಳೆದ 13 ವರ್ಷಗಳಿಂದ ನಿರಂತರವಾಗಿ ಸಮಾಜದಿಂದ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಿರುವ ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ ಕೇಸರಿ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾಗಿ ವಿನೋದ್ ಪೂಜಾರಿ ಗಾಂಧಿನಗರ, ಉಪಾಧ್ಯಕ್ಷರಾಗಿ ಪ್ರವೀಣ್ ಪಿಂಟು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಗುರುವಾಯನಕೆರೆ , ಜೊತೆ ಕಾರ್ಯದರ್ಶಿ ಕಿಶನ್ ಲಾಯಿಲ, ಸಂಘಟನಾ ಪ್ರಮುಖ ಸತೀಶ್ ಕಂಗಿತ್ತಿಲ್ಲ ,



ಸಂಚಾಲಕರಾಗಿ ಪ್ರಶಾಂತ್ ಗುರುವಾಯನಕೆರೆ , ಸಹ ಸಂಚಾಲಕರಾಗಿ ಶರತ್ ಕರಾಯ, ಕೋಶಾಧಿಕಾರಿಯಾಗಿ ಸಂತೋಷ್ ಉಜಿರೆ, ಸಾಮಾಜಿಕ ಜಾಲತಾಣ ಸಂಪತ್ , ಕ್ರೀಡಾಕಾರ್ಯದರ್ಶಿಯಾಗಿ ಗಣೇಶ್ ಕಾಶಿಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವರಾಜ್ ವಿದ್ಯಾರ್ಥಿ ಪ್ರಮುಖ ಸಂದೇಶ್ ರೆಂಕೆದಗುತ್ತು ಆಯ್ಕೆಯಾದರು. ಈ ಸಂದರ್ಭದಲ್ಲಿ ಸದಸ್ಯರು ಉಪಸ್ಥಿತರಿದ್ದರು.

