Sat. Apr 19th, 2025

Puttur: ಪಿಗ್ಮಿ ಸಂಗ್ರಹಕ ವಿಜಯ್ ರೆಬೆಲ್ಲೋ ನಿಧನ

ಪುತ್ತೂರು:(ಎ.16) ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ಮಿ ಸಂಗ್ರಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ⭕ಕಾರ್ಕಳ: ಬಸ್ ಮತ್ತು ಪಿಕಪ್ ನಡುವೆ ಭೀಕರ ಅಪಘಾತ


ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿಲ್ಲ. ಬಳಿಕ ಮನೆ ಮಾಲಕರಿಗೆ ಕರೆ ಮಾಡಿ ವಿಚಾರಿಸಿದರು. ಅವರು ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.


ವಿಜಯ್ ಅವರು ಅವಿವಾಹಿತರಾಗಿದ್ದು, ಮುಕ್ವೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *