ಉಜಿರೆ :(ಎ.17) ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯ ಗೋಪುರ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ತಯಾರಿಯು ಭರದಿಂದ ಸಾಗುತ್ತಿದೆ.

ಇದನ್ನೂ ಓದಿ: ⭕ಬಂಟ್ವಾಳ : ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಮಹಿಳೆ ಸಹಿತ ಮೂವರಿಂದ ಹನಿಟ್ರ್ಯಾಪ್
ಈ ಸುಸಂದರ್ಭದಲ್ಲಿ ಇದರ ಒಂದು ಅಂಗವಾಗಿ ದೇವಸ್ಥಾನದ ಕೆಲಸಗಳಲ್ಲಿ ಎಲ್ಲರೂ ಭಾವನಾತ್ಮಕವಾಗಿ ಒಂದುಗೂಡುವ ಸಲುವಾಗಿ , ಸನಾತನ ಧರ್ಮ ಮತ್ತು ಸಂಸ್ಕೃತಿಯ ಮೂಲ ಬೇರುಗಳ ಉಳಿವಿಗಾಗಿ ಗೌರವಾನ್ವಿತ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರ ಮಾರ್ಗದರ್ಶನದೊಂದಿಗೆ

ಪೆರ್ಲ ಫ್ರೆಂಡ್ಸ್ ಮತ್ತು ಪೆರ್ಲ ಲಕ್ಷ್ಮಿ ಜನಾರ್ಧನ ಸ್ವಾಮಿ ಭಜನಾ ಮಂಡಳಿಗಳ ವತಿಯಿಂದ ಪ್ರತಿ ಮನೆಗೊಂದು ಭಗವದ್ಗೀತಾ ಅಭಿಯಾನ ಕಾರ್ಯಕ್ರಮವು ನಡೆಯಿತು.



ಈ ಸಂದರ್ಭದಲ್ಲಿ ಲಕ್ಷ್ಮಿ ಇಂಡಸ್ಟ್ರೀಸ್ ನ ಮಾಲಕರಾದ ಕೆ.ಮೋಹನ್ ಕುಮಾರ್, ಪೆರ್ಲ ಫ್ರೆಂಡ್ಸ್ ಮತ್ತು ಪೆರ್ಲ ಲಕ್ಷ್ಮಿ ಜನಾರ್ಧನ ಸ್ವಾಮಿ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
