Sat. Apr 19th, 2025

Puttur: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಪಾಕಶಾಲೆ ಉದ್ಘಾಟನೆ

Puttur:(ಎ.18) ಸದಾ ಹೊಸತನ ಮತ್ತು ವಿಶೇಷತೆಗಳಿಗೆ ಹೆಸರಾದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಗ್ರಾಹಕರಿಗೆ ಮತ್ತು ಸಿಬ್ಭಂದಿಗಳಿಗೆ ಮನೆ ಪದ್ಧತಿಯ ಅಪರಾಹ್ನ ಭೋಜನ ಹಾಗೂ ಸಂಜೆ ಉಪಹಾರ ನೀಡುವ ನೂತನ ಪಾಕಶಾಲೆ ಹಾಗೂ ಭೋಜನಶಾಲೆ ಆರಂಭಿಸಿದೆ.‌

ಇದನ್ನೂ ಓದಿ: ⭕ಉಳ್ಳಾಲ: ಯುವತಿ ಮೇಲೆ ಗ್ಯಾಂಗ್‌ ರೇಪ್‌


ಮನೆ ಮನ ಗೆದ್ದಿರುವ ಯುವ ಉದ್ಯಮಿ ಹಾಗೂ ಭಟ್ ಅಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಅವರು ಈ ಶಾಲೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ಮಾತನಾಡುತ್ತಾ ” ಗ್ರಾಹಕ ಸಂತೃಪ್ತಿಯ ಅದ್ಯತೆಯಲ್ಲಿ ಸಿಬಂದಿಗಳಿಗೂ ಒಳಗೊಂಡಂತೆ ಅಪರಾಹ್ನ ಊಟ ಹಾಗೂ ಸಂಜೆಯ ಉಪಹಾರ ವ್ಯವಸ್ಥೆಯ ಬಗ್ಗೆ ” ವಿವರಿಸಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪ್ರದೀಪ್ ಕುಮಾರ್ ಬಡೆಕ್ಕಿಲ ಮಾತನಾಡುತ್ತಾ, ಚಿನ್ನದ ಮಳಿಗೆಯಲ್ಲಿ ಚಿನ್ನದಂತ ಪ್ರೀತಿ ,ಕುಟುಂಬ ರೀತಿಯ ಊಟ ಉಪಚಾರ ಇದಾಗಿದೆ ಎಂದು ಈ ವ್ಯವಸ್ಥೆಯನ್ನು ಶ್ಲಾಘಿಸಿದರು.


ಆಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ “ನಮ್ಮಲ್ಲಿ ರಾಸಾಯನಿಕ ಮುಕ್ತ ಪದಾರ್ಥಗಳಿಂದಲೇ ಊಟ ಉಪಹಾರ ತಯಾರಿಸಿ ಮನೆ ಪದ್ದತಿಯಲ್ಲಿ ಸಿಬ್ಬಂದಿಗಳಿಗೆ ಮತ್ತು ಗ್ರಾಹಕರಿಗೆ ಉಣ ಬಡಿಸುವ ವ್ಯವಸ್ಥೆ, ಗ್ರಾಹಕರಿಗೆ ಸಂತೋಷ ಮತ್ತು ಎಕ್ಸಿಸ್ಟೆಂಟ್ಸ್ ಹೊಸ ಹೆಜ್ಜೆ ”  ಎಂದರು.

Leave a Reply

Your email address will not be published. Required fields are marked *