ಹೊಸಂಗಡಿ:(ಎ.23) ಹೊಸಂಗಡಿ ಗ್ರಾಮದಲ್ಲಿ ಭೀಕರ ಗಾಳಿ ಮಳೆಗೆ ದೇರಾರ್ ಶಾರದಾ ಪೂಜಾರಿ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಗೊಳಗಾಗಿದ್ದು, ಅಪಾರ ನಷ್ಟವಾಗಿರುತ್ತದೆ.

ಹಾಗೇ ಇನ್ನೊಂದು ತೆಂಗಿನ ಮರ ಬಿದ್ದು ಬಚ್ಚಲು, ಕೊಟ್ಟಿಗೆ ಸಂಪೂರ್ಣ ನಾಶವಾಗಿದೆ. ತಕ್ಷಣ ವಿಷಯ ತಿಳಿದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ನಸದಸ್ಯರು ಭೇಟಿ ನೀಡಿ ಒಬ್ಬಂಟಿಯಾಗಿರುವ ಆ ತಾಯಿಗೆ ಧೈರ್ಯವನ್ನು ತುಂಬಿರುತ್ತಾರೆ. ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೆಕ್ರೆಟರಿ ಭೇಟಿ ನೀಡಿ ಪಂಚಾಯತ್ ನಿಂದ ಸಾಧ್ಯವಾದಷ್ಟು ನೆರವನ್ನು ನೀಡುವುದಾಗಿ ತಿಳಿಸಿದ್ದಾರೆ.



ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಹಾಗೂ ಕ್ಲಬ್ ನ ಸದಸ್ಯರು ಗಳಾದ ಚಂದ್ರಶೇಖರ ಚಂದ್ರಕಾಂತ್, ಕೇಶವ ದಿನೇಶ್ ಭರತ್ ಸುದರ್ಶನ್ ಪಿಲಂಬು ಇವರೆಲ್ಲ ಭಾಗಿಯಾಗಿದ್ದರು.

