ಉಜಿರೆ :(ಎ.23) ಅತೀ ದೊಡ್ಡ ಪುಷ್ಪ ರಂಗೋಲಿ ರಚಿಸಿದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿಯ ಸಾಧನೆಗೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿನಂದಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಎಣಿಂಜೆ ನಿವಾಸಿ ಶೇಖರ್ ಶೆಟ್ಟಿ ಅವರ ಪುತ್ರಿ ಶ್ರದ್ಧಾ ಶೆಟ್ಟಿ ಅವರು ಎಂಟು ಅಡಿ ಅಂದರೆ 246 ಸೆಂಟಿಮೀಟರ್ ವ್ಯಾಸದ ವೃತ್ತಾಕಾರದ ಹೂವಿನಿಂದ ರಚಿಸಿದ ರಂಗೋಲಿಗೆ ಪ್ರಶಸ್ತಿ ಲಭಿಸಿದೆ. ಇದನ್ನು 1 ಗಂಟೆ 39 ನಿಮಿಷಗಳಲ್ಲಿ ಗುಲಾಬಿ, ಮಲ್ಲಿಗೆ ಮೊದಲಾದ ವಿವಿಧ ಜಾತಿಯ ಬಣ್ಣ ಬಣ್ಣದ ಹೂಗಳ ದಳದಲ್ಲಿ ರಂಗೋಲಿಯನ್ನು ರಚಿಸಿ ದಾಖಲೆ ಮಾಡಿದ್ದಾರೆ.


ಪ್ರಸ್ತುತ ಶ್ರದ್ಧಾ ಶೆಟ್ಟಿ ಅವರು ಎಸ್‌ಡಿಎಂ ಕಾಲೇಜಿನಲ್ಲಿ ತೃತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಪೋಷಕರು ಹಾಗೂ ಕಾಲೇಜಿನ ಅಧ್ಯಾಪಕರ ಪ್ರೇರಣೆಯೊಂದಿಗೆ ವಿದ್ಯಾರ್ಥಿನಿ ಈ ದಾಖಲೆಯನ್ನು ಬರೆದಿದ್ದಾರೆ.


ಈ ಸಾಧನೆಯನ್ನು ಶ್ಲಾಘಿಸಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿನಿಯ ಪರಿಶ್ರಮದ ಪ್ರತಿಫಲಕ್ಕೆ ಅಭಿನಂದಿಸಿದರು.


