ಬೆಳ್ತಂಗಡಿ:(ಎ.24) ಬಾವಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.24 ರಂದು ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ನಡೆದಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಕಾಶ್ಮೀರ ಉಗ್ರಗಾಮಿ ದಾಳಿ ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ – ಹರೀಶ್ ಪೂಂಜ
ಮೃತ ವ್ಯಕ್ತಿ ಬೆಳ್ತಂಗಡಿ ನಿವಾಸಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ರವರ ಪತಿ ವಿನೋದ್ (48) ರವರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




