ಬೆಳ್ತಂಗಡಿ :(ಎ.26) ಬಂದಾರು, ಮೊಗ್ರು, ಕಣಿಯೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಹೇಳತೀರದು. ಬೈಪಾಡಿ, ಪಾಣೆಕಲ್ಲು, ಮೊಗ್ರು, ಮೈರೋಳ್ತಡ್ಕ, ಊಂತನಾಜೆ, ಮುಗೇರಡ್ಕ,

ಇದನ್ನೂ ಓದಿ: ⭕ಪುತ್ತೂರು: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಗೆ ಖಂಡನೆ
ಪದ್ಮುಂಜ, ಕಣಿಯೂರು ಪ್ರದೇಶದಲ್ಲಿ ಊರಿನ ಅಕ್ಕ -ಪಕ್ಕದಲ್ಲೇ ಟವರ್ ಇದ್ರೂ ನೆಟ್ವರ್ಕ್ ಇಲ್ಲದೆ ಗ್ರಾಹಕರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಟವರ್ ಇದ್ದು ಇಲ್ಲದಂತಾಗಿದೆ. ಇದರಿಂದಾಗಿ ವರ್ಕ್ ಫ್ರಮ್ ಹೋಂ ಉದ್ಯೋಗಿಗಳು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೂ, ಗ್ರಾಹಕರಿಗೆ ಸಮಸ್ಯೆ ಕಾಡಿದೆ.




ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದರು ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದೆ. ಮುಂದೆ ಸಮಸ್ಯೆ ಮುಂದುವರಿದರೆ ಪ್ರತಿಭಟನೆಗೆ ಗ್ರಾಮಸ್ಥರು ಮುಂದಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.
