ಬೆಳ್ತಂಗಡಿ:(ಎ.26) ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಮಲವಂತಿಗೆ – ಮಿತ್ತಬಾಗಿಲು ಸಾರ್ವಜನಿಕ ಗ್ರಾಮಸ್ಥರಿಂದ ಶ್ರದ್ಧಾಂಜಲಿ ಸಭೆಯನ್ನು ದಿಡುಪೆ ಪಂಚಾಯತ್ ಮುಂಭಾಗದಲ್ಲಿ ನಡೆಸಲಾಯಿತು.

ಇದನ್ನೂ ಓದಿ: 🟣ಉಜಿರೆ: ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದ
ಈ ಸಂದರ್ಭದಲ್ಲಿ ಗ್ರಾಮದ ಸರ್ವ ಪಕ್ಷದ ಮುಖಂಡರು ಭಾಗಿಯಾಗಿದ್ದರು. ತೀಕ್ಷಿತ್ ಕೆ ಕಲ್ಬೆಟ್ಟು ಇವರು ಸ್ವಾಗತಿಸುವ ಮೂಲಕ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ, ಸೈನಿಕರ ಜೊತೆ ರಾಷ್ಟ್ರ ರಕ್ಷಣೆ ನಮ್ಮ ಭಾರತ ದೇಶದ ಪ್ರತಿಯೊಂದು ಹಿಂದೂ ಕಾರ್ಯಕರ್ತ ಪ್ರಜೆಗಳ ಮೂಲಕ ಆಗಬೇಕು. ರಾಷ್ಟ್ರ ವಿರೋಧಿಗಳನ್ನು ದೇಶ ಬಿಟ್ಟು ತೊಲಗುವಂತೆ ಮಾಡಬೇಕು. ನಮ್ಮ ದೇಶದ ರಕ್ಷಣೆ ಮೊದಲು. ಪಾಕಿಸ್ತಾನಕ್ಕೆ ದಿಕ್ಕಾರ ಹಾಕುವ ಮೂಲಕ ಹುತಾತ್ಮರಾದ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೇವರು ಕಾಪಾಡುವಂತೆ ನುಡಿದರು.


ಅದೇ ರೀತಿ ವಕ್ತಾರರಾದ ಜಯಂತ ಹೆಗ್ಡೆ ಹೊಸತೋಟ ಇವರು ಮಾತನಾಡಿ ದೇಶದ ಚಿಂತನೆ ಮುಖ್ಯವಾಗಿ ಎಲ್ಲರಿಗೂ ಇರಬೇಕು. ದೇಶದಲ್ಲಿ ಉಗ್ರರನ್ನು ಮಟ್ಟ ಹಾಕುವ ಕೆಲಸ ಭಾರತ ದೇಶದಲ್ಲಿ ನಡೆಯಬೇಕು.

ಅದೇ ರೀತಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕಾಂಗ್ರೆಸ್ ಮುಖಂಡರಾದ ಜಯರಾಮ್ ಅಲಂಗಾರ್ ಇವರು ಮಾತನಾಡಿ ಮಾನವ ಧರ್ಮ ಪಾಲನೆ ಅತೀ ಮುಖ್ಯ, ಭಾರತ ಪ್ರಜೆಯಾಗಿ ಬದುಕಲು ಕಲಿಯಬೇಕು ಎಂದು ಸಭೆಯಲ್ಲಿ ಹೇಳಿದರು.
ಮತ್ತು ಮಧುಸೂಧನ್ ಮಲ್ಲ ಇವರು ಮಾತನಾಡಿ, ಭಾರತ ದೇಶದಲ್ಲಿ ಇದ್ದುಕೊಂಡು ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವ ವ್ಯಕ್ತಿಗಳನ್ನು ಮೊದಲು ದೇಶ ಬಿಟ್ಟು ಓಡಿಸಬೇಕು, ಎಂದು ಹೇಳೀದರು.

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆ ಮುಖಂಡರುಗಳಾದ ಕೇಶವ ಎಂ.ಕೆ. ಕುದ್ಮಾನು, ಪುರಂದರ ಗೌಡ ನಂದಿಕಾಡು, ಜಯವರ್ಮ ಗೌಡ ಕಲ್ಬೆಟ್ಟು,ದಿನೇಶ್ ಗೌಡ ಕಜಕ್ಕೆ, ಸಚಿನ್ ಗೌಡ ಬದ್ಲಾಯಿ, ಶ್ರೀನಿವಾಸ ಗೌಡ ಪಾಡಿಗೆರೆ, ಸಂದೀಪ್ ಗೌಡ ಶೆಟ್ಟಿಹಿತ್ತಿಲು,ಪುನೀತ್ ಗೌಡ ಬಾಲೆಹಿತ್ತಿಲು, ಶಿವರಾಮ ಗೌಡ ವಿದ್ಯಾನಗರ, ಅರುಣ್ ಕೆರೆಕೋಡಿ, ಸುಧೀಶ್ ಗೌಡ ದರ್ಖಾಸು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
