Mon. Apr 28th, 2025

Pangala: ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಪಾಂಗಳ ಹಿರಿಯ ನಾಗರೀಕರ ಆಶ್ರಯದ ಆಸರೆಗೆ 2 ಲಕ್ಷ ರೂ.ದೇಣಿಗೆ

ಪಾಂಗಳ:(ಎ.28) ಸುಮಾರು ಹತ್ತು ವರ್ಷಗಳ ಹಿಂದೆ ಯಾರು ಆಶ್ರಯ ಇಲ್ಲದ ಹಿರಿಯ ನಾಗರೀಕರಿಗೆ ಸೇವೆ ನೀಡಬೇಕು ಅವರಿಗೆ ಆಧಾರವಾಗಬೇಕು ಎಂಬ ಉದ್ದೇಶದಿಂದ ಪೆನ್ ವೆಲ್ ಸೋನ್ಸ್ ಅವರ ದೂರ ದೃಷ್ಟಿಯಿಂದ ಪ್ರಾರಂಭ ಆದ ಈ ಸೇವೆ ಇದೆ ಮೇ 11 ಕ್ಕೆ ದಶಮಾನೋತ್ಸವ ಆಚರಿಸುತ್ತಿದ್ದು,

ಇದನ್ನೂ ಓದಿ: 🟣ಮಂಗಳೂರು: ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಪ್ರಭಾಕರ್.ಎಚ್ ಆರಂಬೋಡಿ ಆಯ್ಕೆ

ಈಗಾಗಲೇ 200 ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ ಆಶ್ರಯ ನೀಡಿದ್ದು ಸರಿ ಸುಮಾರು 20 ಕೊಠಡಿ ಹೊಂದಿರುವ 2 ಮಹಡಿ ಮತ್ತು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿದ್ದು , ಅನೇಕ ದಾನಿಗಳ ಗುರುತಿಸುವಿಕೆಯ ಕೆಲಸ ಕೂಡಾ ದಶಮಾನೋತ್ಸವ ಸಂದರ್ಭದಲ್ಲಿ ನಡೆಯಲಿದೆ.

ಸುಮಾರು ಒಂದು ಕೋಟಿಗೂ ಹೆಚ್ಚು ಕಟ್ಟಡಕ್ಕೆ ತಗುಲಿದ್ದು ಸಂಸ್ಥೆ ನಡೆಸುವಲ್ಲಿ ತುಂಬಾ ಕಷ್ಟವಿದ್ದರೂ ವೀರೇಂದ್ರ ಹೆಗ್ಗಡೆಯವರ ಪ್ರಸಾದ ರೂಪದ 2 ಲಕ್ಷ ರೂ ದೊಡ್ಡ ಆಧಾರವಾಗಿದೆ, ಮುಂದಕ್ಕೂ ಹೆಗ್ಡೆಯವರ ಪ್ರೀತಿ ನಮ್ಮ ಹಿರಿಯ ನಾಗರೀಕರ ಮೇಲೆ ಸದಾ ಇರಲಿ ದೇವರ ಮೇಲೆ ನಂಬಿಕೆಯಿಂದ ನಡೆಯುವುದು ಎಂಬ ವಿಶ್ವಾಸ ನಮಗಿದೆ.

ಈ ದೇಣಿಗೆಗೆ ಸಹಾಯ ಮಾಡಿದ ಧರ್ಮಸ್ಥಳದ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿ ಗಳಿಗೆ ಎಲ್ಲರಿಗೂ ಹೃದಯ ಅಂತರಾಳದ ಕೃತಜ್ಞತೆ ಎಂದು ಆಸರೆ ಸಂಸ್ಥೆಯ ಮುಖ್ಯ ಕಾರ್ಯ ನಿರ್ದೇಶಕರಾದ ಪೆನ್ ವೆಲ್ ಸೋನ್ಸ್ ಹೇಳಿದರು. ಕ್ಷೇತ್ರದ ವತಿಯಿಂದ ನೀಡಲಾದ 2 ಲಕ್ಷ ದ ಚೆಕ್ ಮಮತಾ ಶೆಟ್ಟಿ ಯವರು ಹಸ್ತಾಂತರ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೀತಾಂಜಲಿ ಸುವರ್ಣ ಅವರು ಮಾತೃಶ್ರೀ ಅಮ್ಮ ಮತ್ತು ಖಾವಂದರು ರಾಜ್ಯ ಹಾಗೂ ದೇಶಕ್ಕೆ ನೀಡುತ್ತಿರುವ ಕೊಡುಗೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಒಕ್ಕೂಟದಿಂದ ರಾಘವೇಂದ್ರ ಶೆಟ್ಟಿ, ಸುಮಿತ್ರಾ, ವೀಣಾ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜನೆ ಸಂತೋಷ್ ಎಂ ಶೆಟ್ಟಿಗಾರ್ ( ಉಸಿರುಗಾಗಿ ಹಸಿರು ಸಂಸ್ಥೆ ) ಮಾಡಿದರು.

Leave a Reply

Your email address will not be published. Required fields are marked *