Thu. May 1st, 2025

Ujire: ಭಾಗವತ ಧರ್ಮ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ – ಗೌರವಾಧ್ಯಕ್ಷರಾಗಿ ಶರತ್ ಕೃಷ್ಣ ಪಡ್ವೆಟ್ನಾಯ , ಅಧ್ಯಕ್ಷರಾಗಿ ಕೃಷ್ಣ ಸಂಪಿಗೆತ್ತಾಯ

ಉಜಿರೆ:(ಮೇ.1)ಧರ್ಮೋ ರಕ್ಷತಿ ರಕ್ಷಿತಃ ಎಂಬ ಘೋಷವಾಕ್ಯದೊಂದಿಗೆ ಆರಂಭಗೊಂಡ ” ಭಾಗವತ ಧರ್ಮ ರಕ್ಷಣಾ ವೇದಿಕೆ ” ಯು ಗೌರವಾಧ್ಯಕ್ಷ ರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಇವರ ನೇತೃತ್ವದಲ್ಲಿ, ಕಾರ್ಯಾಧ್ಯಕ್ಷರಾದ, ಗಂಗಾಧರ ರಾವ್ ಕೆವುಡೇಲು, ಶ್ರೀ ಶ್ರೀಶ ಮುಚ್ಚಿನಾಯ ಹಾಗೂ ಶ್ರೀ ವಿಷ್ಣು ಸಂಪಿಗೆತ್ತಾಯ ಮತ್ತಿತರ ಬಂಧುಗಳ ಪ್ರಾರ್ಥನೆಯೊಂದಿಗೆ ಎ.30 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ಮನೆಯ ಮೇಲೆ ಬಿದ್ದ ಭಾರೀ ಗಾತ್ರದ ಮರ

ಮುಂದಿನ ಮೇ ತಿಂಗಳಿಂದ ಶ್ರೀಮಠ ಬಾಳೆಕುದ್ರು, ಸಂಸ್ಥೆಗೆ ಒಂದು ವರ್ಷದ ಸಂಪನ್ಮೂಲ ಒದಗಿಸುವುದಾಗಿಯೂ ನಿರ್ಣಯಿಸಲಾಗಿದೆ.12 ಜನ ಸಮಾನ ಮನಸ್ಕರು ಸೇರಿಕೊಂಡು ‘ ಭಾಗವತ ಧರ್ಮ ರಕ್ಷಣಾ ವೇದಿಕೆ'(ಟ್ರಸ್ಟ್) ಎಂಬ ಸಂಘಟನೆಯನ್ನು ತಾ.13.04.2025. ರಂದು ಉಜಿರೆಯಲ್ಲಿ ಪ್ರಾರಂಭ ಗೊಂಡು ಬೆಳ್ತಂಗಡಿ ತಾಲೂಕು ಕೇಂದ್ರಸ್ಥಾನ ವಾಗಿರಿಸಿಕೊಂಡು,

ಪ್ರಾರಂಭಿಲಾದ ವೇದಿಕೆಯ ಸಮಿತಿಯ ಟ್ರಸ್ಟಿಗಳಾಗಿ ಹಾಗೂ ಗೌರವಾಧ್ಯಕ್ಷರಾಗಿ ಶರತ್ ಕೃಷ್ಣ ಪಡ್ವೆಟ್ನಾಯ, ಉಜಿರೆ, ಅಧ್ಯಕ್ಷರಾಗಿ ಕೃಷ್ಣ ಸಂಪಿಗೆತ್ತಾಯ ತೆಂಕಕಾರಂದೂರು , ಕಾರ್ಯಧ್ಯಕ್ಷರಾಗಿ ಗಂಗಾಧರ ರಾವ್ ಕೆವುಡೇಲು, ಕಾರ್ಯದರ್ಶಿಯಾಗಿ ದಯಾನಂದ ಎಳಚಿತ್ತಾಯ, ಸದಸ್ಯರುಗಳಾಗಿ ಡಾ. ಎಂ.ಎಂ. ದಯಾಕರ್, ಉಜಿರೆ, ಶ್ರೀನಿವಾಸ ಭಟ್ ಚಾಟರ್ಡ್ ಅಕೌಂಟೆಂಟ್ ಮೂಡಬಿದ್ರೆ , ಪ್ರದ್ಯುಮ್ನ ವಕೀಲರು, ಬೆಂಗಳೂರು, ಡಾ. ಸೂರ್ಯ ನಾರಾಯಣ ತೋಡ್ತಿಲ್ಲಾಯ, ಬೆಂಗಳೂರು, ಕೆ. ವಿಷ್ಣು ಸಂಪಿಗೆತ್ತಾಯ ತೆಂಕಕಾರಂದೂರು,
ಶ್ರೀಶ ಮುಚ್ಚಿನ್ನಾಯ ಬೆಳ್ತಂಗಡಿ, ಕೆ. ಶ್ರೀಶ ಸಂಪಿಗೆತ್ತಾಯ ಬೆಂಗಳೂರು, ಶ್ರೀಪತಿ ಅರಿಪಡಿತ್ತಾಯ, ಉಜಿರೆ, ಗೌರವ ಸಲಹೆಗಾರಾಗಿ ಶ್ರೀಪತಿ ಭಟ್ ಗಂಟಾಲ್ ಕಟ್ಟೆ ಮೂಡಬಿದ್ರೆ, ಶ್ರೀಕಾಂತ್‌ ಸಂಪಿಗೆತ್ತಾಯ,ಬೆಂಗಳೂರು ಆಯ್ಕೆಯಾಗಿದ್ದಾರೆ

ಸನಾತನ ಧರ್ಮದ ರಕ್ಷಣೆಯ ಬಗ್ಗೆ ರಚಿಸಿದ ಈ ವೇದಿಕೆ ಧರ್ಮೋ ರಕ್ಷತಿ ರಕ್ಷಿತಃ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾದ ಈ ಸಂಘಟನೆ ಪ್ರತಿ ತಿಂಗಳಿನ ದೇಣಿಗೆ ಸಂಪನ್ಮೂಲವನ್ನು ವರ್ಷದ ಆದಿಯಲ್ಲಿ ನಿಶ್ಚಿತ, ದೇವಸ್ಥಾನ, ಮಠ, ಗೋಶಾಲೆ ಗಳ ಪುನರುಜ್ಜೀವನ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದು ವೇದಿಕೆ ಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *