Sat. May 3rd, 2025

Belthangady: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ:(ಮೇ.2) ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಇದರ ಪದಗ್ರಹಣ ಸಮಾರಂಭ, ಆಂಬುಲೆನ್ಸ್ ಲೋಕಾರ್ಪಣೆ, ಆಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಬೆಳ್ತಂಗಡಿಯು ಸಿವಿಸಿ ಹಾಲ್‌ ನಲ್ಲಿ ನಡೆಯಿತು.

ಇದನ್ನೂ ಓದಿ: 🟠ಬೆಳಾಲು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಾಲು ಎಸ್.ಡಿ.ಎಂ. ಪ್ರೌಢಶಾಲೆಗೆ ಶೇ. 93.54 ಫಲಿತಾಂಶ


ಈ ಪದಗ್ರಹಣ ಸಮಾರಂಭದಲ್ಲಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ, ಕಾವೂರು ಮಂಗಳೂರು ಇವರು ದೀಪಪ್ರಜ್ವಲನೆ ಮಾಡಿ ಆಶೀರ್ವಚನವನ್ನು ನೀಡಲಿದ್ದಾರೆ. ಒಕ್ಕಲಿಗ ಗೌಡ ಸಮಾಜದ ಅನೇಕ ಗಣ್ಯಾತಿಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಮಾರಂಭವು ಮೇ 25 ರಂದು ಆದಿತ್ಯವಾರ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಮೋಹನ್ ಕುಮಾರ್ ಕಲ್ಮಂಜ, ಕಾರ್ಯದರ್ಶಿಯಾದ ಭರತ್ ಗೌಡ ಬಂಗಾಡಿ, ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ಫೌಂಡರ್ ಟ್ರಸ್ಟಿಗಳಾದ ರಂಜನ್ ಜಿ ಗೌಡ, ಶ್ರೀನಿವಾಸ ಗೌಡ ಬೆಳಾಲು, ಜಯಂತ ಗೌಡ ಗುರಿಪಳ್ಳ, ವಿಜಯ ಗೌಡ ವೇಣೂರು, ವಸಂತ ಗೌಡ ಮರಕಡ, ನವೀನ್ ಬಿ.ಕೆ ನಿಡ್ಲೆ ಮತ್ತು ಟ್ರಸ್ಟಿಗಳು ಹಾಜರಿದ್ದರು.

Leave a Reply

Your email address will not be published. Required fields are marked *