ಮಿತ್ತಬಾಗಿಲು: (ಮೇ.2) 2025 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 35 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಇದನ್ನೂ ಓದಿ: 🟣ಧರ್ಮಸ್ಥಳ: ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ
ಕು||ಶ್ರೀಮುಕ್ತಿ 587 ಅಂಕಗಳೊಂದಿಗೆ (ವಿಜ್ಞಾನ-100/100) ಶಾಲೆಗೆ ಪ್ರಥಮ ಸ್ಥಾನ, ಕು|| ಪೃಥ್ವಿ 580 ಅಂಕಗಳೊಂದಿಗೆ (ಇಂಗ್ಲಿಷ್-100/100) ಶಾಲೆಗೆ ದ್ವಿತೀಯ ಸ್ಥಾನ, ಕು || ಜಿ ರಶ್ಮಿತಾ ಕುಮಾರಿ 551 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ.

ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿರುತ್ತಾರೆ.
ಹಾಗೆಯೇ ಸಹಕರಿಸಿದ ಎಲ್ಲಾ ಪೋಷಕರಿಗೂ ಹಾಗೂ ಊರವರಿಗೂ ಧನ್ಯವಾದಗಳನ್ನು ತಿಳಿಸಿರುತ್ತಾರೆ.



