Mon. May 5th, 2025

PUTTUR: (ಮೇ.05)ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ

ಪುತ್ತೂರು: ರಾಮಾಯಣ ಮಹಾಕಾವ್ಯ ನಮಗೆಲ್ಲರಿಗೂ ಗೌರವದ ಕಲಾಕೃತಿ. ಹಿಂದೂ ಪರಮಪವಿತ್ರ ಗ್ರಂಥವಾದ ಶ್ರೀ ರಾಮಾಯಣವು ನಮಗೆಲ್ಲರಿಗೂ ಸದಾ ಆದರ್ಶವಾಗಿರುವಂತಹ ಪ್ರಭು ಶ್ರೀರಾಮನ ಜೀವನದ ಚಿತ್ರಣ. ಪ್ರತಿಯೊಂದು ಜೀವಿಯೂ ತಾನು ಹೇಗೆ ಬದುಕಬೇಕು ಎಂಬುದರ ದೃಷ್ಟಾಂತರೂಪವನ್ನು ಶ್ರೀರಾಮಾಯಣ ಮಹಾಕಾವ್ಯದಲ್ಲಿ ಅಳವಡಿಸಲಾಗಿದೆ.

ಪಂಚವಟಿಯಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸ ಮಾಡುತ್ತಿರುವಾಗ ರಾವಣನಿಂದ ಅಪಹೃತಗೊಂಡ ಸೀತೆಯನ್ನು ಅರಸಿ ರಾವಣನ ವಧೆಯ ಬಳಿಕ ಮತ್ತೆ ಎಲ್ಲರೂ ಒಂದಾಗಿ ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷೇಕವಾಗುವ ಕಥೆಯನ್ನು ಶ್ರೀರಾಮ ಪುನರಾಗಮನ ರೂಪಕದಲ್ಲಿ ಅಳವಡಿಸಲಾಗಿದೆ.

ಮುಳಿಯ ದ ನವೀಕೃತ ನೂತನ ವಿಸ್ತ್ರತ ಆಭರಣ ಮಳಿಗೆಯ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯ ಭಾಗವಾಗಿ ಮೇ 05, ಸೋಮವಾರ ಸಂಜೆ 6 .00 ಕ್ಕೆ ರೂಪಕವು ಪ್ರಸ್ತುತವಾಗಲಿದೆ.ನೃತ್ಯ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಅವರ ಶಿಷ್ಯವೃಂದವು ರಾಮಾಯಣದ ಅವತರಣಿಕೆಯನ್ನು ನೃತ್ಯರೂಪಕದ ಮೂಲಕ ಅಭಿನಯಿಸಲಿದ್ದು ಕ್ರಿಯಾತ್ಮಕ ವಸ್ತ್ರವಿನ್ಯಾಸಗಳು, ಉತ್ಕೃಷ್ಟ ಅಭಿನಯ , ರಾಮಾಯಣದ ಚಿತ್ರಣ ಪುನರಾವರ್ತಿಸಿ ರೂಪಕ ಪ್ರದರ್ಶನ ಗೊಳ್ಳಲಿದೆ.

ವಿದುಷಿ ಯೋಗೀಶ್ವರಿಯವರ ಶಿಷ್ಯವೃಂದ, ಅಭಿನಯಿಸಲಿರುವ ಈ ರೂಪಕದ ಸಂಗೀತ ಗಾಯನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ಶಿಕ್ಷಕರು ವಿದ್ವಾನ್ ವೆಳ್ಳಿಕೊತ್ ವಿಷ್ಣುಭಟ್ ಹಾಗೂ ಶ್ರೀ ವಸಂತ ಕುಮಾರ್ ಗೋಸಾಡರವರು ಮಾಡಲಿದ್ದು ಸಾಹಿತ್ಯವನ್ನು ಡಾ.ರಾಜೇಶ್ ಬೆಜ್ಜಂಗಳ ರಚಿಸಿದ್ದು , ನಟುವಾಂಗ ಮತ್ತು ನೃತ್ಯ ನಿರ್ದೇಶನ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ನೆರವೇರಿಸಲಿದ್ದಾರೆ.
ಮೃದಂಗ ವಿದ್ವಾನ್ ಗಿತೇಶ್ ಕುಮಾರ್ ನೀಲೇಶ್ವರ್,ಕೊಳಲು ವಿದ್ವಾನ್ ರಾಜ ಗೋಪಾಲ್ ಕಾಞಂಗಾಡ್, ರಿದಂ ಪ್ಯಾಡ್ : ಶ್ರೀ ಶಶಾಂಕ್ ಬಿ ಸಿ ರೋಡ್ , ವರ್ಣಾಲಂಕಾರ: ಭಾವನಾ ಕಲಾ ಆರ್ಟ್ಸ್ ಪುತ್ತೂರು ಅವರು ಸಹಕಾರ ನೀಡಲಿದ್ದಾರೆ.

14 ವರ್ಷಗಳ ಹಿಂದೆ ಮುಳಿಯ ಸಂಸ್ಥೆಯು ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಾಗ ಶ್ರೀ ರಾಮಕಥಾ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂಬುದನ್ನು ಮುಳಿಯು ಸಂಸ್ಥೆಯ ಸಿ.ಎಂ.ಡಿ ಶ್ರೀ ಕೇಶವ ಪ್ರಸಾದ್ ಮುಳಿಯರವರು ಮೆಲುಕು ಹಾಕಿಕೊಂಡರು.

ಮುಳಿಯ ಶೋರೂಮ್ ಮೇಲಂಸ್ತಿನಲ್ಲಿರುವ ಅಪರಂಜಿ ಗಾರ್ಡನ್ ನಲ್ಲಿ ನಡೆಯಲಿರುವ ಶ್ರೀರಾಮ ಪುನರಾಗಮನ ನೃತ್ಯರೂಪಕ ಸುಂದರ ದೃಶ್ಯಕಾವ್ಯ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಭಾಗವಹಿಸಿ, ಸಹಕರಿಸಬೇಕೆಂದು ಮುಳಿಯ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *