ಬೆಳ್ತಂಗಡಿ :(ಮೇ.6) ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಅಲೆಕ್ಕಿಯ ಬದಿನಡೆ ಕ್ಷೇತ್ರ ಸುಮಾರು 400/500 ವರ್ಷಗಳ ಇತಿಹಾಸವಿರುವ ಕ್ಷೇತ್ರ. ಕಾನಂಗು ಅರಣ್ಯದ ತಪ್ಪಲಿನಲ್ಲಿ ಕಾಡು ಪೊದೆಗಳಿಂದ ಆವರಿಸಿ ಹಿಂದಿನ ಕಾಲದ ದೇವಸ್ಥಾನವಿದ್ದ ಕುರುಹುಗಳಿದ್ದು ಅಜೀರ್ಣಾವಸ್ಥೆಯಲ್ಲಿತ್ತು.

ಇದನ್ನೂ ಓದಿ: ⭕ಮಂಗಳೂರು: ದಕ್ಷಿಣ ಕನ್ನಡದಲ್ಲಿ ಹೈ ಅಲರ್ಟ್!!!
ದೇವರ ಪ್ರೇರಣೆಯಿಂದ ಇದೀಗ ಜೀರ್ಣಾವಸ್ಥೆಗೆ ಬಂದು ಊರವರೆಲ್ಲ ಸೇರಿಕೊಂಡು ಸಮಿತಿ ರಚನೆ ಮಾಡಿಕೊಂಡು ಖ್ಯಾತ ದೈವಜ್ಞ ರನ್ನು ಕರೆಸಿ ಪ್ರಶ್ನಾಚಿಂತನೆಯನ್ನು ನಡೆಸಿ ದಿನಾಂಕ 06/05/2025 ರಿಂದ 09/05/2025 ರ ತನಕ ಪ್ರಾಯಶ್ಚಿತ್ತಾದಿ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ನಂತರ ಅಲ್ಲಿರುವ ದೇವಸ್ಥಾನ ಕುರುಹುಗಳಿರುವ ಸ್ಥಳಗಳನ್ನು ಶೋಧಿಸಿಕೊಂಡು ದೈವಜ್ಞರಿಂದ ಇನ್ನೊಮ್ಮೆ ಪ್ರಶ್ನೆಚಿಂತನೆ ನಡೆದು ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಜರುಗಲಿದೆ.

ಮೇ.6 ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಸರಿಯಾಗಿ ಪುಣ್ಯಾಹ, ಸಾಮೂಹಿಕ ಪ್ರಾರ್ಥನೆ, ಮುಷ್ಠಿಕಾಣಿಕೆ, ಖನನಾದಿ, ಸಪ್ತಶುದ್ಧಿ, ಗಣಹೋಮ, ದೀಪ ಜಲಾಧಿವಾಸ, ಭೂವರಾಹ ಹೋಮವು ಧರ್ಮಸ್ಥಳದ ತಂತ್ರಿಗಳಾದ ವೇದಮೂರ್ತಿ ಶ್ರೀ ವಿಷ್ಣುಮೂರ್ತಿ ಹೆಬ್ಬಾರ್ ಮುಂಡ್ರುಪ್ಪಾಡಿ ಇವರ ಮಾರ್ಗದರ್ಶನದಲ್ಲಿ ಕಲ್ಮಂಜ ಶ್ರೀ ಅನಂತೇಶ ಚಡಗ ಇವರ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ತುಕಾರಾಮ್ ಸಾಲಿಯಾನ್, ಕಾರ್ಯದರ್ಶಿಯಾದ ಸುನಿಲ್ ಕನ್ಯಾಡಿ, ಮತ್ತಿತರ ಗಣ್ಯರು ಭಾಗವಹಿಸಿದ್ದರು. ಭಗವದ್ ಭಕ್ತರಾಗಿ ಊರಿನ ನೂರಾರು ಜನರು ಸೇರಿದ್ದರು.



