Wed. May 7th, 2025

Puttur: ದೇಶದಲ್ಲಿ ಮೊದಲ ಬಾರಿಗೆ ಜ್ಯುವೆಲ್ಲರಿ ಶಾಪ್ ನಲ್ಲಿ ವಜ್ರ ಪರೀಕ್ಷೆಯ ಯಂತ್ರ ಅಳವಡಿಸಿದ ಪುತ್ತೂರಿನ ಮಳಿಗೆ!!

ಪುತ್ತೂರು:(ಮೇ.6) ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಇಲ್ಲದ ವಸ್ತುಗಳು ಸಿಗೋದು ಅಷ್ಟು ಸುಲಭದ ಮಾತಲ್ಲ. ತಿನ್ನುವ ಆಹಾರ ಪದಾರ್ಥಗಳಿಂದ ಹಿಡಿದು, ಧರಿಸುವ ಆಭರಣದವರೆಗೂ ಇಂದು ಕಲಬೆರಕೆಯಿದೆ. ಅದರಲ್ಲೂ ತನ್ನ ದುಡಿಮೆಯಲ್ಲಿ ಕೂಡಿಟ್ಟು ಆಭರಣಗಳನ್ನು ತೆಗೆಯುವ ಸಂದರ್ಭದಲ್ಲಿ ಅಸಲಿ ಚಿನ್ನ,ವಜ್ರದ ಜೊತೆಗೆ ನಕಲಿ ಬಂದು ಸೇರಿಕೊಂಡಲ್ಲಿ ಭಾರೀ ನಷ್ಟ ಅನುಭವಿಸಬೇಕಾಗುತ್ತೆ.

ಇದನ್ನೂ ಓದಿ: 🟠ಬೆಳ್ತಂಗಡಿ : ಶ್ರೀ ಬದಿನಡೆ ಕ್ಷೇತ್ರದಲ್ಲಿ ಪ್ರಾಯಶ್ಚಿತ್ತಾದಿ ಪೂಜೆ ಹಾಗೂ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ

ಚಿನ್ನದಲ್ಲಿ ಕಲಬೆರಕೆ ಇದ್ದಂತೆ ವಜ್ರದಲ್ಲೂ ಕಲಬೆರಕೆ ಹೆಚ್ಚಾಗುತ್ತಿದ್ದು, ಇವುಗಳನ್ನು ಪತ್ತೆಹಚ್ಚಲು ಕೆಲವು ಯಂತ್ರಗಳು ಮಾರುಕಟ್ಟೆಯಲ್ಲಿದೆ. ಈ ಯಂತ್ರಗಳು ಕೇವಲ ವಜ್ರ ತಯಾರಿಸುವ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಮಾತ್ರ ಕಾಣಬಹುದಾಗಿದ್ದು, ಇದೀಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಜ್ಯುವೆಲ್ಲರಿ ಶೋರೂಂ ನಲ್ಲಿ ಇದನ್ನು ಅಳವಡಿಸಲಾಗಿದೆ. ಚಿನ್ನ ಮತ್ತು ಬೆಳ್ಳಿಯ ವ್ಯಾಪಾರದಲ್ಲಿ ಕಳೆದ ಎಂಟು ದಶಕಗಳಿಂದ ಮಾರುಕಟ್ಟೆಯಲ್ಲಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನಲ್ಲಿ ಈ ಯಂತ್ರವನ್ನು ಭಾರತದಲ್ಲಿ ಮೊದಲ ಬಾರಿಗೆ ಎನ್ನುವಂತೆ ಅಳವಡಿಸಲಾಗಿದೆ.

ಈ ಯಂತ್ರವು ಆಭರಣಗಳಲ್ಲಿ ಅಳವಡಿಸಲಾದ ವಜ್ರಗಳು ಅಸಲಿಯೋ,ನಕಲಿಯೋ ಎನ್ನೋವ ಸತ್ಯವನ್ನು ಗ್ರಾಹಕರ ಮುಂದೆಯೇ ತೆರೆದಿಡುತ್ತದೆ. ಲ್ಯಾಬ್ರೋನ್ ಡೈಮಂಡ್ ಟೆಸ್ಟರ್ ಎಂದು ಕರೆಯಲ್ಪಡುವ ಈ ಯಂತ್ರದಲ್ಲಿ ವಜ್ರದ ಹರಳನ್ನು ಇಟ್ಟ ತಕ್ಷಣವೇ ಯಂತ್ರ ಪರೀಕ್ಷೆಗೆ ಒಳಪಡಿಸಿದ ವಜ್ರ ಅಸಲಿಯೋ, ನಕಲಿಯೋ ಅನ್ನೋದನ್ನ ತಿಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಿ ವಜ್ರಗಳನ್ನು ಫ್ಯಾಕ್ಟರಿಗಳಲ್ಲಿ ತಯಾರಿಸಲಾಗುತ್ತಿದ್ದು, ನೋಡಲು ಮತ್ತು ಗುಣಮಟ್ಟದಲ್ಲಿ ಅಸಲಿಗೆ ಸರಿಸಾಟಿಯಾಗುವ ರೀತಿಯಲ್ಲಿ ಈ ವಜ್ರಗಳಿರುತ್ತವೆ. ಆದರೆ ನೈಸರ್ಗಿಕವಾಗಿ ಸಿಗುವ ವಜ್ರಗಳು ದಿನಗಳು ಕಳೆದಂತೆ ತನ್ನ ಹೊಳಪು ಮತ್ತು ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದೆ ನೈಸರ್ಗಿಕವಾಗಿಯೇ ಇರುತ್ತವೆ. ಆದರೆ ಲ್ಯಾಬ್ರೋ ಡೈಮಂಡ್ ಗಳಲ್ಲಿ ಕಾಲಕ್ರಮೇಣ ಹೊಳಪು ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಲ್ಯಾಬ್ರೋ ಡೈಮಂಡ್ ಗಳನ್ನು ಗ್ರಾಹಕನ ಜೊತೆಗೆ ಮಾರಾಟಗಾರರೂ ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ.

ಈ ಕಾರಣಕ್ಕಾಗಿ ತಮ್ಮ ಬಳಿಗೆ ಬರುವ ಗ್ರಾಹಕರು ವಜ್ರದಲ್ಲಿ ಮೋಸ ಹೋಗಬಾರದು ಎನ್ನುವ ಉದ್ಧೇಶದಿಂದ ಜ್ಯುವೆಲ್ಲರಿ ಶಾಪ್ ಗಳಲ್ಲಿ ಇದೇ ಮೊದಲ ಬಾರಿಗೆ ಈ ಯಂತ್ರವನ್ನು ಅಳಪಡಿಸಲಾಗಿದೆ. ಗ್ರಾಹಕರ ಮುಂದೆಯೇ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದಿರಲಿ ಎನ್ನುವ ಕಾರಣಕ್ಕೆ ಈ ಯಂತ್ರಗಳನ್ನು ತಮ್ಮ ಎಲ್ಲಾ ಶೋರೂಂಗಳಲ್ಲಿ ಅಳವಡಿಸಲಾಗಿದೆ ಎಂದು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಕೃಷ್ಣ ನಾರಾಯಣ ಮುಳಿಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *