Thu. May 8th, 2025

ಬೆಳ್ತಂಗಡಿ: “ಆಪರೇಷನ್ ಸಿಂಧೂರ್” ಪಹಲ್ಗಾಮ್ ದಾಳಿಗೆ ಪ್ರತೀಕಾರ – ಹರೀಶ್‌ ಪೂಂಜ

ಬೆಳ್ತಂಗಡಿ:(ಮೇ.7) ಭಾರತವು ಪಾಕಿಸ್ಥಾನದ ಉಗ್ರ ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದ್ದು, ಭಯೋತ್ಪಾದನೆಯ ವಿರುದ್ಧದ ಸಂಕಲ್ಪವನ್ನು ಪ್ರಬಲವಾಗಿ ಸಾರಿದೆ.

ಭಾರತವೆಂದೂ ಜಗ್ಗದು, ಬಗ್ಗದು…ಇದು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ನಮ್ಮ ಸೈನ್ಯದ ಶೌರ್ಯದ ಫಲ. ನಾವೆಲ್ಲರೂ ಹೆಮ್ಮೆಪಡುವಂತಹ ಕ್ಷಣ – ಇದು ಕೇವಲ ಸೇನಾ ಯಶಸ್ಸಲ್ಲ, ಇದು ದೇಶದ ಗೌರವ, ಆತ್ಮ ಸಮ್ಮಾನದ ಯಶಸ್ಸು

ನಾವೆಲ್ಲರೂ ದೇಶದ ಹೆಮ್ಮೆಯ ಸೈನಿಕರಿಗೆ ನೈತಿಕ ಬಲ ತುಂಬಬೇಕಾಗಿದೆ, ಸೈನ್ಯದ ಕಾರ್ಯಾಚರಣೆಗೆ ಬೆಂಬಲ ಸೂಚಿಸಿ. ದೇಶದ ಸೈನಿಕರ ಧೈರ್ಯವರ್ಧನೆಗಾಗಿ ಮತ್ತು ದೇವರ ಆಶೀರ್ವಾದಕ್ಕಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಬೇಕೆಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕರಾದ ಹರೀಶ್ ಪೂಂಜ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *