ಬೆಳ್ತಂಗಡಿ:(ಮೇ.7) ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ವಿರುದ್ಧ ವೇಣೂರು ಪೊಲೀಸರಿಗೆ ನೊಂದ ಬಾಲಕಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶಿರ್ಲಾಲು ಗ್ರಾಮದ ಸನತ್ (28ವ) ಎಂಬಾತನೇ ಆರೋಪಿಯಾಗಿದ್ದಾನೆ.

ಆರೋಪಿ ಸನತ್ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಬಾಲಕಿಯ ತಂದೆಯೊಂದಿಗೆ ಆಗಾಗ ಮನೆಗೆ ಬಂರುತ್ತಿದ್ದ. ಈ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಸಲುಗೆಯಿಂದ ಇದ್ದ ಎಂದು ತಿಳಿದು ಬಂದಿದೆ. ಬಾಲಕಿಯ ಜನ್ಮ ದಿನದ ಕಾರ್ಯಕ್ರಮಕ್ಕೆ ಬಂದು ಆರೋಪಿ ರಾತ್ರಿ ಮನೆಯಲ್ಲಿ ಉಳಿದುಕೊಂಡಿದ್ದು, ರಾತ್ರಿ ಬಾಲಕಿ ಮಲಗಿದ ಕೋಣೆಗೆ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ.

ತದನಂತರದ ದಿನಗಳಲ್ಲಿ ಕೂಡಾ ಆಗಾಗ ರಾತ್ರಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಇದೀಗ ಆರೋಪಿ ಸನತ್ ವಿರುದ್ದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣಾ ಅ.ಕ್ರ: 41/2025 ಕಲಂ: 64 BNS-2023 : 4,6 2012ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.




