Sat. May 10th, 2025

Belthangady: (ಮೇ.17 – ಮೇ.23) ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಹಾಗೂ ವಿವಿಧ ಸಂಘ – ಸಂಸ್ಥೆಗಳ ಸಹಕಾರದಲ್ಲಿ ಭಗವದ್ಗೀತ ಪ್ರವಚನ ಸಪ್ತಾಹ

ಬೆಳ್ತಂಗಡಿ:(ಮೇ.10) ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಹಾಗೂ ರೋಟರಿ ಕ್ಲಬ್‌ ಬೆಳ್ತಂಗಡಿ, ಲಯನ್ಸ್‌ ಕ್ಲಬ್‌ ಬೆಳ್ತಂಗಡಿ, ಮಂಜುಶ್ರೀ ಜೆಸಿಐ ಬೆಳ್ತಂಗಡಿ, ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್‌ ಉಜಿರೆ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಬೆಳ್ತಂಗಡಿ,

ಇದನ್ನೂ ಓದಿ: 🟠ನಾವೂರು: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಹಾಗೂ

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ(ರಿ.), ಪ್ರಗತಿ ಮಹಿಳಾ ಮಂಡಲ(ರಿ.) ಉಜಿರೆ, ತುಳು ಶಿವಳ್ಳಿ ಮಹಾಸಭಾ ಬೆಳ್ತಂಗಡಿ ತಾಲೂಕು, ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್‌ ಸಹಕಾರದಲ್ಲಿ ಮೇ.17 ರಿಂದ ಮೇ.23 ರ ತನಕ ಭಗವದ್ಗೀತ ಪ್ರವಚನ ಸಪ್ತಾಹವು ಸಮಾಜ ಮಂದಿರ ಬೆಳ್ತಂಗಡಿಯಲ್ಲಿ ಜರುಗಲಿದೆ.

ಪ್ರವಚನಕಾರರಾಗಿ ವೀಣಾ ಬನ್ನಂಜೆ ಅವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸೋನಿಯಾ ಯಶೋವರ್ಮ ನೆರವೇರಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಆರೋಗ್ಯ ಕ್ಲಿನಿಕ್‌ ನಾವೂರಿನ ಡಾ.ಪ್ರದೀಪ್‌ ಆಟಿಕುಕ್ಕೆ ಹಾಗೂ ಹಿರಿಯ ಕೃಷಿಕರು ಮತ್ತು ಸಹಕಾರಿಗಳಾದ ಎಂ. ಜನಾರ್ದನ ಪೂಜಾರಿ ಗೇರುಕಟ್ಟೆ ಇವರು ಇರಲಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು