Chaitra Kundapura:(ಮೇ.15) ಚೈತ್ರಾ ಕುಂದಾಪುರ ಅವರ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್ ಮಾಡಿದ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಇತ್ತೀಚೆಗೆ ಚೈತ್ರಾ ಅವರು ವಿವಾಹ ಆದರು. ಆದರೆ, ಈ ಮದುವೆಗೆ ತಮ್ಮನ್ನು ಕರೆದೇ ಇಲ್ಲ ಎಂದು ಬಾಲಕೃಷ್ಣ ಆರೋಪಿಸಿದ್ದಾರೆ. ಅಲ್ಲದೆ, ಚೈತ್ರಾ ಮಾಡಿದ ಮೋಸ-ವಂಚನೆಗಳನ್ನು ಕೂಡ ಅವರು ಬಿಚ್ಚಿಟ್ಟಿದ್ದಾರೆ. ಈ ಆರೋಪಗಳಿಗೆ ಚೈತ್ರಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ತಂದೆ ಕುಡುಕ’ ಎಂದು ನೇರ ಮಾತುಗಳಲ್ಲಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 🟣ಉಪ್ಪಿನಂಗಡಿ: ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ
ಚೈತ್ರಾ ಕುಂದಾಪುರ ಅವರು ಶ್ರೀಕಾಂತ್ ಕಶ್ಯಪ್ ಹೆಸರಿನ ಹುಡಗನನ್ನು ಇತ್ತೀಚೆಗೆ ವಿವಾಹ ಆದರು. ಈ ಮದುವೆಗೆ ಚೈತ್ರಾ ತಂದೆ ಅವರು ಬಂದಿರಲಿಲ್ಲ. ತಂದೆ ಸ್ಥಾನದಲ್ಲಿ ನಿಂತು ರಜತ್ ಅವರು ಒಂದಷ್ಟು ಶಾಸ್ತ್ರಗಳನ್ನು ಮಾಡಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿತ್ತು. ಮದುವೆ ಆದ ಕೆಲವೇ ದಿನಗಳಲ್ಲಿ ಮಾತನಾಡಿದ್ದ ಬಾಲಕೃಷ್ಣ ಅವರು ನನಗೆ ವಿವಾಹಕ್ಕೆ ಆಮಂತ್ರಣವೇ ಇರಲಿಲ್ಲ ಎಂದು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಒಂದನ್ನು ಹಾಕಿದ್ದಾರೆ. ‘ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ’ ಎಂದು ಚೈತ್ರಾ ಬರೆದಿದ್ದಾರೆ.

ಚೈತ್ರಾ ಬಗ್ಗೆ ತಂದೆ ಬಾಲಕೃಷ್ಣ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಹಣದ ಆಸೆಗೆ ಚೈತ್ರಾ ಸಾಕಷ್ಟು ಮೋಸ ಮಾಡಿದ್ದಾರೆ ಎಂದಿದ್ದಾರೆ. ಚೈತ್ರಾ ಮಾತ್ರವಲ್ಲದೆ, ಚೈತ್ರಾ ಪತಿ ಶ್ರೀಕಾಂತ್ ಕೂಡ ಕಳ್ಳ ಎನ್ನುವ ಆರೋಪವನ್ನು ಅವರು ಮಾಡಿದ್ದರು.

ನನ್ನ ಮಗಳ ವಿವಾಹವನ್ನು ನಾನು ಒಪ್ಪಲಾರೆ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ನನ್ನ ಪುತ್ರಿಯ ಬೆಂಬಲ ಕೊಟ್ಟಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ’ ಎಂದು ಬಾಲಕೃಷ್ಣ ಹೇಳಿದ್ದಾರೆ.


