Tue. Jul 1st, 2025

Kasaragod: ಪ್ರಿಯಕರನ ಜೊತೆ ರೊಮ್ಯಾಂಟಿಕ್‌ ವಿಡಿಯೋ ಕಾಲ್‌ – ಅಡ್ಡಿಯಾದ ಮಗನಿಗೆ ಬರೆ ಎಳೆದ ತಾಯಿ – ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಎಸ್ಕೇಪ್!!

ಕಾಸರಗೋಡು:(ಮೇ.15) ತನ್ನ ಪ್ರೇಮ ಸಂಬಂಧಕ್ಕೆ ತಾನೇ ಹೆತ್ತ ಮಗು ಅಡ್ಡಿಯಾಗಿದೆ ಎಂದು ಹತ್ತು ವರ್ಷದ ಮಗನಿಗೆ ಬಿಸಿ ಪಾತ್ರೆಯಿಂದ ಬರೆ ಎಳೆದು ನರಳುವಂತೆ ಮಾಡಿ, ನಂತರ ಪ್ರಿಯಕರನ ಜೊತೆ ತಾಯಿ ಪರಾರಿಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಇದನ್ನೂ ಓದಿ: 🛑ಮಂಗಳೂರು : ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು


ಮಹಿಳೆ ಯುವಕನ ಜೊತೆ ಅಕ್ರಮ ಪ್ರೇಮ ಸಂಬಂಧ ಹೊಂದಿದ್ದಳು. ಇವರಿಬ್ಬರೂ ವಿಡಿಯೋ ಕಾಲ್‌ನಲ್ಲಿ ತಮ್ಮ ಸರಸ ಸಲ್ಲಾಪದಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದರು.

ಆದರೆ ಇವರ ಈ ಅಕ್ರಮ ಸಂಬಂಧಕ್ಕೆ ಮಗ ಅಡ್ಡಿಯಾಗಿದ್ದಾನೆ. ಪ್ರಿಯಕರನ ಜೊತೆ ಮಾತನಾಡುವಾಗ ಮಗ ಅಡ್ಡಿಯಾಗುತ್ತಾನೆಂದು, ಕ್ರೂರಿ ತಾಯಿ ಅಲ್ಯೂಮಿನಿಯಂ ಪಾತ್ರೆಯನ್ನು ಕಾಯಿಸಿ ಮಗನ ಹೊಟ್ಟೆಗೆ ಒತ್ತಿ ಇಟ್ಟು ಹಿಂಸೆ ಕೊಟ್ಟಿದ್ದಾಳೆ.

ನಂತರ ಆತನನ್ನು ಅಲ್ಲೇ ನರಳಲು ಬಿಟ್ಟು, ಪ್ರಿಯತಮನ ಜೊತೆ ಎಸ್ಕೇಪ್‌ ಆಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *