Thu. May 15th, 2025

Namrata Gowda: ನಮ್ರತಾ ಗೌಡಗೆ ರಾಜಕಾರಣಿಗಳ ಜೊತೆ ಡೇಟಿಂಗ್ ಮಾಡುವಂತೆ ಕಿರುಕುಳ!! ಕಿರುತೆರೆ ನಟಿ ನಮ್ರತಾ ಗೌಡ ಏನಂದ್ರು?

Namrata Gowda:(ಮೇ.15) ಬಿಗ್‌ ಬಾಸ್‌ ಮಾಜಿ ಸ್ಪರ್ಧಿ, ಕಿರುತೆರೆ ನಟಿ ನಮ್ರತಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ನಮ್ರತಾ ಅವರಿಗೆ ಅಸಭ್ಯವಾದ ಮೆಸೇಜ್‌ಗಳನ್ನು ಕಳಿಸಿದ್ದು, ಕೋಪಗೊಂಡ ನಟಿ ತನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಅದರ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ⭕ತೆಕ್ಕಟ್ಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ

ನಟಿ ನಮ್ರತಾ ಅವರಿಗೆ ವ್ಯಕ್ತಿಯೊಬ್ಬ ಪದೇ ಪದೇ ಸಂದೇಶ ಕಳಿಸಿ ಟಾರ್ಚರ್ ಕೊಟ್ಟಿದ್ದಾನೆ. ಒಂದೇ ರೀತಿಯ ಮೆಸೇಜ್‌ಗಳು 2-3 ಬಾರಿ ಕಳುಹಿಸಲಾಗಿದೆ. ಮೊದಲು, ಎರಡನೇ ಬಾರಿ ನಿರ್ಲಕ್ಷ್ಯ ಮಾಡಿದ್ದ ನಮ್ರತಾ, ಇದೀಗ ಕಿಡಿಗೇಡಿಗಳ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಮಿಸ್ಟರ್ ರೋಷನ್ ಸಾಕಿನ್ನು ನಿಲ್ಲಿಸಿ ಎಂದು ಮರ್ಯಾದೆಯಿಂದ ಹೇಳಿದ್ದಾರೆ.

ಏನಿದು ‘ಡೇಟಿಂಗ್’ ಮೆಸೇಜ್‌?
ಹಾಯ್, ನಾನು ಕೆಲವು ರಾಜಕಾರಣಿಗಳು ಹಾಗೂ VIPಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್​ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್​ಗೆ ಬರಲು ಇಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ. ನಿಮ್ಮ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಈ ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ.

ರಾಕಿ ಜಿ43 (Rocky.g43) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಿಂದ ನಮ್ರತಾ ಅವರಿಗೆ ಈ ಮೆಸೇಜ್‌ಗಳು ಬಂದಿದೆ. ನೇರವಾಗಿ ನನಗೆ ಸಾಕಷ್ಟು ರಾಜಕಾರಣಿಗಳ ಜೊತೆ ನಂಟು ಇದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್​ಗೆ ಬರಲು ಇಚ್ಛೆ ಇದೆಯಾ? ಅಂತ ನಮ್ರತಾ ಅವರನ್ನು ಕೇಳಿದ್ದಾರೆ. ಡೇಟಿಂಗ್​ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ಸಹ ಒತ್ತಾಯಿಸಲಾಗಿದೆ.

ಕಿಡಿಗೇಡಿಯ ಈ ಮೆಸೇಜ್‌ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ನಮ್ರತಾ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

ನಮ್ರತಾ ಗೌಡ ಏನಂದ್ರು?
ನಾನು ಅವನ ರಿಕ್ವೆಸ್ಟ್ ಮೆಸೇಜ್‌ಗಳನ್ನು ಒಪ್ಪಿಕೊಂಡಿಲ್ಲ. ಇವತ್ತು ನನ್ನ ರಿಕ್ವೆಸ್ಟ್ ಮೆಸೇಜ್‌ಗನ್ನು ಲಿಸ್ಟ್ ನೋಡುವಾಗ ಇದು ನನ್ನ ಕಣ್ಣಿಗೆ ಬಿತ್ತು. ಹೀಗಾಗಿ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದೇನೆ. ಇಂತಹ ತುಂಬಾ ಮೆಸೇಜ್‌ಗಳು ಬರುತ್ತಾ ಇರ್ತಾವೆ. ಬಂದಾಗ ನಿರ್ಲಕ್ಷಿಸಿ ನಾವು ಮುಂದೆ ಹೋಗುತ್ತೇವೆ.

ಈ ಬಾರಿ ನಿರ್ಲಕ್ಷ್ಯ ಮಾಡಿದ್ರೂ ಇವರಿಗೆ ಭಯ ಹುಟ್ಟಲ್ಲ ಎಂದು ನಾನು ಇವತ್ತು ಇನ್ಸ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿ ಬಹಿರಂಗ ಮಾಡಿದ್ದೇನೆ. ಇನ್ನು ಮುಂದೆ ಬೇರೆ ಯಾರು ಯಾರಿಗೂ ಈ ರೀತಿಯ ಮೆಸೇಜ್ ಹಾಕಬಾರದು ಅಂತ ಈ ರೀತಿ ಮಾಡಿದ್ದೇನೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು