Fri. May 16th, 2025

Mangaluru: ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ – ಕರ್ನಾಟಕದಾದ್ಯಂತ 5000ಕ್ಕೂ ಅಧಿಕ ಹಿಂದುತ್ವನಿಷ್ಠರಿಂದ ಗೋವಾದತ್ತ ಪ್ರಯಾಣ !

ಮಂಗಳೂರು:(ಮೇ.16) ಮಾನವ ಕುಲದ ಪರಮಕಲ್ಯಾಣ ಮತ್ತು ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ

ಇದನ್ನೂ ಓದಿ: 🔴ಧರ್ಮಸ್ಥಳ: ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರು ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್

ಫೊಂಡಾ ಗೋವಾದಲ್ಲಿ ಮೇ 17 ರಿಂದ 19 ರ ವರೆಗೆ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವವನ್ನು ಫರ್ಮಾಗುಡಿ , ಫೊಂಡಾ ,ಗೋವಾ ದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಉತ್ಸವದಲ್ಲಿ ಸಹಭಾಗಿ ಆಗಲು ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ ೪೦೦ಕ್ಕೂ ಅಧಿಕ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ‘ ಸನಾತನ ರಾಷ್ಟ್ರ ‘ ದ ಜಯ ಘೋಷದ ಜೊತೆಗೆ ವಾಹನಗಳ ಮೂಲಕ ಗೋವಾದ ಕಡೆಗೆ ಪ್ರಯಾಣ ಮಾಡಿದ್ದಾರೆ.

ಎಲ್ಲಾ ಹಿಂದುತ್ವ ನಿಷ್ಠರು ಕೇಸರಿ ಟೋಪಿ ಧರಿಸಿದ್ದರು ಮತ್ತು ವಾಹನಗಳು/ಬಸ್ಸು/ರೈಲು/ವಿಮಾನದ ಮೇಲೆ ಕೇಸರಿ ಧ್ವಜ ಹಾರಿಸಿರುವುದರಿಂದ ಸಂಪೂರ್ಣ ವಾತಾವರಣದಲ್ಲಿ ಚೈತನ್ಯ ಮತ್ತು ಶಕ್ತಿಯ ಸಂಚಾರ ಆಗುತ್ತಿತ್ತು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು