Sun. May 18th, 2025

Sullia: ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ಬಿ.ವೈ. ವಿಜಯೇಂದ್ರ

ಸುಳ್ಯ:(ಮೇ.18) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೋರಂಬಡ್ಕದಲ್ಲಿ ನಡೆದ ಕೊರಗಜ್ಜ ದೈವದ ವಿಶೇಷ ಹರಕೆ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗಿಯಾದರು.

ಇದನ್ನೂ ಓದಿ: ⭕ಬೆಳ್ತಂಗಡಿ: ಧರ್ಮಸ್ಥಳ ಮೂಲದ ಆಕಾಂಕ್ಷ ಪಂಜಾಬ್ ನಲ್ಲಿ ನಿಗೂಢವಾಗಿ ಸಾವು

ಸುಳ್ಯ ಜಯನಗರದ ಶ್ರೀನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆ ಕಾರ್ಯಕ್ರಮ ನಡೆಯಿತು.

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವಂತೆ ಸಂಕಲ್ಪ ಮಾಡಿ ಬಿಜೆಪಿ ಜಯನಗರ ಬೂತ್ ಸಮಿತಿ ಹರಕೆ ಹೇಳಿತ್ತು. ಇದೀಗ ಬಿಜೆಪಿ ವತಿಯಿಂದ ಹರಕೆ ನೇಮೋತ್ಸವ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಈ ವೇಳೆ ಸಂಸದ ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿ ಹಲವು ಮಂದಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಸುಳ್ಯ ಬಿಜೆಪಿ ಘಟಕ ಸಂಸದ ಬ್ರಿಜೇಶ್ ಚೌಟ ಮೂಲಕ ಕೊರಗಜ್ಜ ದೈವದ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲಿದೆ.

Leave a Reply

Your email address will not be published. Required fields are marked *