Mon. May 19th, 2025

Belthangady: ಧರ್ಮಸ್ಥಳದ ಯುವತಿ ಆಕಾಂಕ್ಷಾ ಸಾವು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಬೆಳ್ತಂಗಡಿ:(ಮೇ.19) ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ, ಪ್ರಸ್ತುತ ಕಾಶಿಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಜೆಡಿಎಸ್ ಮಾಜಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂದೇವಿ ದಂಪತಿ ಪುತ್ರಿ,ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ಅವರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ನಡೆದಿದೆ.

ಆಕಾಂಕ್ಷ ಎಸ್‌ ನಾಯರ್‌ ನಿಗೂಢ ಸಾವು ಪ್ರಕರಣಕ್ಕೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದು ಬಂದಿದೆ.

ಆಕಾಂಕ್ಷಾ ಎಸ್‌ ದೆಹಲಿಯಲ್ಲಿ ಏರೋಸ್ಪೇಸ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಜಪಾನ್‌ಗೆ ಉದ್ಯೋಗಕ್ಕೆಂದು ತೆರಳಲು ತಯಾರಿ ಮಾಡಿದ್ದ ಆಕಾಂಕ್ಷ ಸರ್ಟಿಫಿಕೇಟ್‌ ತರಲೆಂದು ಪಂಜಾಬ್‌ಗೆ ಹೋಗಿದ್ದಳು.

ಪೊಲೀಸರು ನೀಡಿರುವ ವರದಿಯ ಪ್ರಕಾರ, ಆಕಾಂಕ್ಷಾ ಪಗ್ವಾರದ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್‌ ಮ್ಯಾಥ್ಯೂ ಎಂಬುವವರನ್ನು ಪ್ರೀತಿಸುತ್ತಿದ್ದು, ಇದಕ್ಕೆ ಮ್ಯಾಥ್ಯೂ ಒಪ್ಪಿರಲಿಲ್ಲ. ಅಲ್ಲದೆ ನನಗೆ ಎರಡು ಮಕ್ಕಳಿದ್ದಾರೆ. ನಾನು ಮದುವೆಯಾಗಲ್ಲ ಎಂದು ಹೇಳಿ ಮನೆಯಿಂದ ಹೊರಗೆ ಕಳುಹಿಸಿದ್ದರು.

ಕಾಲೇಜಿಗೆ ಬಂದ ಆಕಾಂಕ್ಷ ಮ್ಯಾಥ್ಯೂ ಅವರನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದರೆ ಮ್ಯಾಥ್ಯೂ ಇದಕ್ಕೆ ಒಪ್ಪದಾಗ ಇಬ್ಬರ ನಡುವೆ ಜಗಳವಾಗಿದೆ. ನಂತರ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಧ್ಯಾಪಕ ಬಿಜಿಲ್‌ ಮ್ಯಾಥ್ಯೂ ವಿರುದ್ಧ ಪಂಜಾಬ್‌ನ ಜಲಂಧರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು