ಬೆಳ್ತಂಗಡಿ:(ಮೇ.20) ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಗ್ರಾಮ ಸೀಮಿತ ಪುರುಷರ ಹಾಗೂ ಮಹಿಳೆಯರ 7 ಜನರ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟವು ಮೇ.25 ರಂದು ನಡೆಯಲಿದೆ.


ಇದನ್ನೂ ಓದಿ: ⭕ಗುಂಡ್ಯ: ಕೆಎಸ್‌ಆರ್‌ಟಿಸಿ ಬಸ್ & ಲಾರಿ ನಡುವೆ ಅಪಘಾತ

ನಿಯಮಗಳು:
- ಬೆಳ್ತಂಗಡಿ ತಾಲೂಕಿನ ತಂಡಕ್ಕೆ ಮಾತ್ರ ಅವಕಾಶ.
- ಗ್ರಾಮ ಸೀಮಿತ ಪಂದ್ಯಾಟ ಇರುವುದರಿಂದ ಆಧಾರ್ ಕಾರ್ಡ್ ಹೆಸರು ಇರುವ ಗ್ರಾಮದಲ್ಲಿ ಆಡತಕ್ಕದ್ದು.
- ಎಲ್ಲಾ ತಂಡದ ಸದಸ್ಯರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.
- ತಂಡಗಳು A&B ಇದ್ದಲ್ಲಿ ಕಡ್ಡಾಯ 2 ತಂಡಗಳು ಅಂಕಣಕ್ಕೆ ಬರುವುದು. ವಾಕ್ ಓವರ್ ಗೆ ಅವಕಾಶ ಇಲ್ಲ.
- ದೇಹದ ಯಾವುದೇ ಭಾಗಕ್ಕೆ ಹಾಕಿ ಹಗ್ಗ ಎಳೆಯಬಹುದು.
- ಸಂಘಟಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ.


ಆಟಗಾರರಿಗೆ ಅದ್ಭುತ ಅವಕಾಶ, ಉಚಿತ ಪ್ರವೇಶ ಶುಲ್ಕ, ಪ್ರತೀ ತಂಡಕ್ಕೆ ನೆನಪಿನ ಕಾಣಿಕೆ, ಗೆಲ್ಲುವ ತಂಡಕ್ಕೆ ಅತ್ಯದ್ಬುತ ಟ್ರೋಫಿ , ನಗದು ಬಹುಮಾನ ,ಸರ್ವರಿಗೂ ಉಪಹಾರದ ವ್ಯವಸ್ಥೆ, ತಂಪು ಪಾನೀಯ ವ್ಯವಸ್ಥೆ , ಇಂತಹ ಅದ್ಭುತ ಕಾರ್ಯಕ್ರಮವನ್ನು ನೀವು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8971500130 / 9900957030 ಸಂಪರ್ಕಿಸಬಹುದು.

