Madenuru Manu: ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಖ್ಯಾತಿ ಪಡೆದ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಿರುತೆರೆ ನಟಿಯೊಬ್ಬರು ಇವರ ವಿರುದ್ಧ ಈ ರೀತಿಯ ಆರೋಪ ಹೊರಿಸಿದ್ದಾರೆ.

ಸದ್ಯ ಈ ವಿಚಾರ ಸೆನ್ಸೇಷನ್ ಸೃಷ್ಟಿ ಆಗಿದೆ. ಅವರಿಗೆ ಈಗ ಬಂಧನ ಭೀತಿ ಶುರುವಾಗಿದೆ. ಅವರ ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ರಿಲೀಸ್ ಸಂದರ್ಭದಲ್ಲಿಯೇ ಈ ರೀತಿ ಆಗಿರೋದು ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.
ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನುಗೆ ಕಿರುತೆರೆ ನಟಿ ಪರಿಚಯ ಆಗಿದೆ. ಆ ಬಳಿಕ ಇವರ ಮಧ್ಯೆ ಗೆಳೆತನ ಬೆಳೆದಿದೆ. ಈಗ ‘ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ’ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಮನುಗಾಗಿ ಹುಡುಕಾಟ ನಡೆದಿದೆ.


ಮಡೆನೂರು ಮನು ಅವರು ‘ಕಾಮಿಡಿ ಕಿಲಾಡಿಗಳು’ ಮೂಲಕ ಭರ್ಜರಿ ಫೇಮಸ್ ಆದರು. ಆ ಬಳಿಕ ಅವರಿಗೆ ವಿವಿಧ ರೀತಿಯ ಆಫರ್ಗಳು ಬರೋಕೆ ಆರಂಭಿಸಿದವು. ಆದರೆ, ಅವರು ಅಳೆದು-ತೂಗಿ ಸಿನಿಮಾ ಮಾಡೋಕೆ ಪ್ರಾರಂಭಿಸಿದರು. ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಹೀರೋ ಆಗುವುದರಲ್ಲಿದ್ದರು. ಸಿನಿಮಾ ರಿಲೀಸ್ ಸಂದರ್ಭದಲ್ಲೇ ಅವರ ವಿರುದ್ಧ ಈಗ ಗಂಭೀರ ಆರೋಪ ಎದುರಾಗಿದೆ.



