Fri. May 23rd, 2025

Mangaluru: ಮದುವೆ ವಿಚಾರಕ್ಕೆ ಗಲಾಟೆ – ಗಲಾಟೆ ಅಂತ್ಯವಾಗಿದ್ದು ಕೊಲೆಯಲ್ಲಿ!!

ಮಂಗಳೂರು (ಮೇ.23): ಮದುವೆ ವಿಚಾರಕ್ಕೆ ನಡೆದ ಗಲಾಟೆ, ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ನಡೆದಿದೆ.

ಚಾಕುವಿನಿಂದ ಇರಿದು ವಾಮಂಜೂರು ನಿವಾಸಿ ಸುಲೇಮಾನ್(50) ಎಂಬಾತನನ್ನು ಸಂಬಂಧಿ ಮುಸ್ತಾಫ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಸುಲೇಮಾನ್​ನ ಇಬ್ಬರು ಪುತ್ರರಾದ ರಿಯಾಬ್​, ಸಿಯಾಬ್​​ ಮೇಲೂ ಹಲ್ಲೆ ನಡೆಸಿ ಪರಾರಿ ಆಗಿದ್ದ ಮುಸ್ತಾಫನನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿ ಮುಸ್ತಾಫ ಎಂಬವರ ಮದುವೆಯನ್ನು ಸುಲೇಮಾನ್ ನೆರವೇರಿಸಿದ್ದ. ಇವರಿಬ್ಬರ ನಡುವೆ ಮದುವೆ ಸಂದರ್ಭದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರವಾಗಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಇಬ್ಬರು ಪುತ್ರರೊಂದಿಗೆ ಸುಲೇಮಾನ್ ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸುಲೇಮಾನ್​ಗೆ ಮುಸ್ತಾಫ ಚೂರಿಯಿಂದ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸುಲೇಮಾನ್​​ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯಮುಸ್ತಾಫನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *