Fri. May 23rd, 2025

Ujire: ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಾಜಿ ಸೈನಿಕರ ನಗದು ರಹಿತ ಚಿಕಿತ್ಸಾ ಯೋಜನೆಯ ಉದ್ಘಾಟನೆ ಹಾಗೂ ಸನ್ಮಾನ

ಉಜಿರೆ:(ಮೇ.23) ಮಾಜಿ ಸೈನಿಕರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಾತ್ರ
ದೊರಕುವಂತಹ ಮಾಜಿ ಸೈನಿಕರ ನಗದು ರಹಿತ ಚಿಕಿತ್ಸಾ ಯೋಜನೆಯ (ECHS)ವ್ಯವಸ್ಥೆಗೆ ಬೆನಕ ಆಸ್ಪತ್ರೆಯನ್ನು
ಸೇರಿಸಿಕೊಂಡಿದ್ದು, ಅದರ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮವು ಮೇ 22 ರಂದು ಬೆನಕ ಆಸ್ಪತ್ರೆಯ
ಆವರಣದಲ್ಲಿ ನಡೆಯಿತು.

ಇದನ್ನೂ ಓದಿ: 🟣ಉಜಿರೆ: ಎಸ್. ಎಸ್.ಎಲ್. ಸಿ ಮರು ಮೌಲ್ಯಮಾಪನದಲ್ಲಿ 624 ಅಂಕ ಪಡೆದು ಶಾರಾನ್ ಡಿಸೋಜಾ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್


ವೈದ್ಯಕೀಯ ಆರೈಕೆ ಅಗತ್ಯ ಇರುವ ರೋಗಿಗಳಿಗೆ ಸರಿಯಾದ ರೀತಿಯ ಸೇವೆ ನೀಡಿದರೆ ಮಾತ್ರ ಆಸ್ಪತ್ರೆಯು
ಜನಾನುರಾಗಿಯಾಗಿರುತ್ತದೆ ಎಂಬುದಕ್ಕೆ ಬೆನಕ ಆಸ್ಪತ್ರೆ ಸಾಕ್ಷಿಯಾಗಿದೆ. ವೈದ್ಯರು ರೋಗಿಗಳ ಅವಶ್ಯಕತೆ ಬಗ್ಗೆ ಹಾಗೂ
ರೋಗಿಗಳು ವೈದ್ಯರ ಕಾಳಜಿ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು ಸೇವೆ ನೀಡುವ ಅನಿವಾರ್ಯತೆ ಇದೆ, ಈ ನಿಟ್ಟಿನಲ್ಲಿ
ಬೆನಕ ಆಸ್ಪತ್ರೆ ಗುಣಮಟ್ಟದ ಅನನ್ಯ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ಕರ್ನಲ್ ನಿತಿನ್ ಭಿಡೆ ಅವರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್ ಪ್ರಾಸ್ತವಿಕವಾಗಿ ಮಾತನಾಡಿ, ಪ್ರತಿಯೊಬ್ಬರ
ಕೊಡುಗೆಯು ಆಸ್ಪತ್ರೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ದೇಶ ಕಾಯುವ ಯೋಧನ ಹಾಗೆಯೇ ದೇಹ ಕಾಯುವ
ವೈದ್ಯರ  ಸೇವೆಯು ಸಮಾಜಕ್ಕೆ ಅಮೂಲ್ಯವಾಗಿದೆ. ರಜತ ಸಂಭ್ರಮದಲ್ಲಿರುದ ನಮ್ಮ ಆಸ್ಪತ್ರೆಗೆ ಈ ವರ್ಷವೇ ಮಾಜಿ
ಸೈನಿಕರ ನಗದು ರಹಿತ ಚಿಕಿತ್ಸಾ ಯೋಜನೆ ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡಿರುವುದು ನಮ್ಮ
ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.


ಇದೇ ಸಮಯದಲ್ಲಿ ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷರು ಮೇಜರ್ ಜನರಲ್ ಎಂ.ವಿ ಭಟ್,
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ, ಕಾರ್ಯದರ್ಶಿ ಉಮೇಶ್ ಬಂಗೇರ ಹಾಗೂ ವಾಯು ಸೇನೆಯ
ನಿವೃತ್ತ ಜೆಪಿಎಂ ಕಡಬದ ಚೆರಿಯನ್ ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ
ಹಿರಿಯರಾದ ಶ್ರೀ ಸೀತಾರಾಮ್ ಭಟ್, ಡಾ. ಭಾರತಿ ಜಿ ಕೆ , ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೆನಕ
ಆಸ್ಪತ್ರೆಯ ಪಿ ಆರ್ ಓ ಎಸ್.ಜಿ ಭಟ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *