ಉಜಿರೆ:(ಮೇ.23) ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ.25 ಬುಧವಾರ ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಆದೇಶದಂತೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 25-05-2025ನೇ ಆದಿತ್ಯವಾರ ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1.00ರವರೆಗೆ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ.


ಇದನ್ನೂ ಓದಿ: 🛑ಮಂಗಳೂರು: ಮದುವೆ ವಿಚಾರಕ್ಕೆ ಗಲಾಟೆ
ಕಣ್ಣಿನ ತಜ್ಞರಾದ ಡಾ| ಸುಭಾಶ್ಚಂದ್ರ MBBS, MS ( Ophtho) ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿದ್ದು, 10% ರಿಯಾಯಿತಿ ದರದಲ್ಲಿ ಔಷಧ, ಒಳರೋಗಿ ವಿಭಾಗದ ಶುಲ್ಕದಲ್ಲಿ 10% ರಿಯಾಯಿತಿ, ಲ್ಯಾಬ್ & ರೇಡಿಯಾಲಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, 25% ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡಕ ದೊರೆಯಲಿದೆ.



ಕಣ್ಣಿನ ಪೊರೆಗೆ ಚಿಕಿತ್ಸೆ ಮತ್ತು ಲೈನ್ಸ್ ಅಳವಡಿಕೆ, ದೃಷ್ಟಿದೋಷ ನಿವಾರಣೆ, ಕಂಪ್ಯೂಟರೈಸ್ ಕಣ್ಣಿನ ಚಿಕಿತ್ಸೆ ,ಕಾರ್ನಿಯಾ ರೆಟಿನಾ ಸ್ಕ್ರೀನಿಂಗ್ ,ಕಣ್ಣಿನ ದುರ್ಮಾಂಸ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ, ಕಾಂಟಾಕ್ಟ್ ಲೆನ್ಸ್ ಕ್ಲಿನಿಕ್, ಡಯಾಬಿಟಿಕ್ ಕಣ್ಣಿನ ಚಿಕಿತ್ಸೆ, ಮುಂತಾದ ಸೇವೆಗಳು ಲಭ್ಯವಿದೆ ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

