ಬೆಳ್ತಂಗಡಿ:(ಮೇ.27) ಮುಳಿಯ ಗೋಲ್ಡ್ & ಡೈಮಂಡ್ಸ್ ಬೆಳ್ತಂಗಡಿ ಶೋರೂಮ್ ನ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ, ತಾಲೂಕು ಮಟ್ಟದ ಗ್ರಾಮ ಸೀಮಿತ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಮೇ. 25 ರಂದು ಬೆಳ್ತಂಗಡಿ ಮುಳಿಯದ ಹಿಂಭಾಗದ ಮೈದಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ವಿಟ್ಲ, ದೈಹಿಕ ಶಿಕ್ಷಕ ರಾಜೇಶ್ ಉಪಸ್ಥಿತರಿದ್ದರು.



ಈ ವೇಳೆ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ತನ್ವಿ ಭಟ್, ಶೆರೋನಾ ಡಿಸೋಜ, ಮನಶ್ರೀ, ಸುಪ್ರಿಯಾ, ಅಂಶಿತಾ ಜೋಸೆಫ್, ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ತುಷಾರ ಬಿ ಎಸ್, ಸಿಂಚನಾ, ಜೋಶನ್ ರಾಫೆಲ್, ದೀಕ್ಷಾ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮುಳಿಯ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಲೋಹಿತ್ ಕುಮಾರ್ ಸ್ವಾಗತಿಸಿದರು. ದೀಪಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಪಡಿಪಂಡ ಹಗ್ಗಜಗ್ಗಾಟದ ವೀಕ್ಷಕ ವೇಳೆ ವಿವರಣೆ ಮಾಡಿದರು. ಮುಳಿಯ ಸಿಬ್ಬಂದಿ ವರ್ಗ ಸಹಕರಿಸಿದರು.

ಹಗ್ಗಜಗ್ಗಾಟ ಫಲಿತಾಂಶ:
ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಪ್ರಥಮ ಬ್ರಹ್ಮಲಿಂಗೇಶ್ವರ ಮರೋಡಿ , ದ್ವಿತೀಯ ಮಣಿಕಂಠ ಫ್ರೆಂಡ್ಸ್ ಬೆಳಾಲು, ತೃತೀಯ ಫ್ರೆಂಡ್ಸ್ ಮಲ್ಲಿಪ್ಪಾಡಿ, ಚತುರ್ಥ ವೀರ ಕಲ್ಕುಡ ಪದ್ಮುಂಜ ಪಡೆದುಕೊಂಡರು.

ಮಹಿಳೆಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಪ್ರಥಮ ತೃಪ್ತಿ ಫ್ರೆಂಡ್ಸ್ ಮೊಗ್ರು ಬಂದಾರು, ದ್ವಿತೀಯ ವನದುರ್ಗಾ ಬರೆಂಗಾಯ, ತೃತೀಯ ದುರ್ಗಾಂಬ ಇಳಂತಿಲ ಪಡೆದುಕೊಂಡರು.
