Sun. Jun 1st, 2025

Manzotti: ಸ್ಟಾರ್ ಲೈನ್ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

ಮಂಜೊಟ್ಟಿ:(ಮೇ.30) ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ಮೇ 29ರ ಗುರುವಾರದಂದು 2025 -26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಶುಭಾರಂಭ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನಡೆಯಿತು.

ಇದನ್ನೂ ಓದಿ: ⭕ಮಂಗಳೂರು: ಕಮಿಷನರ್, ಎಸ್ಪಿ ಎತ್ತಂಗಡಿ


ಆಡಳಿತ ಟ್ರಸ್ಟಿನ ಸಂಚಾಲಕರಾದ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, ಕಾರ್ಯದರ್ಶಿಯಾದ ಸಯ್ಯದ್ ಮಹಮ್ಮದ್ ಅಯ್ಯುಬ್, ಶಾಲಾ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಹಾಗೂ ಶಿಕ್ಷಕ ವೃಂದವು ಜೊತೆಗೂಡಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಪ್ರೀತಿಯಿಂದ ಸ್ವಾಗತಿಸಲಾಯಿತು. ಅತಿಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷ ಎಲ್ಲರಿಗೂ ಶುಭದಾಯಕವಾಗಿರಲಿ ಎಂದು ಹಾರೈಸಿದರು.

Leave a Reply

Your email address will not be published. Required fields are marked *