Mon. Jun 2nd, 2025

Mulki: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ – ಬಜ್ಪೆ ಯುವಕ ಪೋಲಿಸ್‌ ವಶಕ್ಕೆ

ಮೂಲ್ಕಿ, (ಮೇ.30): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ಮೂಲ್ಕಿಯಲ್ಲಿ ನಡೆದಿದೆ.

ಇದನ್ನೂ ಓದಿ: 🪄🏫ಮಂಜೊಟ್ಟಿ: ಸ್ಟಾರ್ ಲೈನ್ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

ಪಕ್ಷಿಕೆರೆ ಮೂಲದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಬಜಪೆಯ ಪ್ರೀತಮ್ ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 25, 2025ರಂದು ಆರೋಪಿ ಪ್ರೀತಮ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಹಾಸನದ ಉದಯಪುರಕ್ಕೆ ಕರೆದುಕೊಂಡು ಹೋಗಿದ್ದನು. ಬಾಲಕಿಯ ತಾಯಿ, ತನ್ನ ಮಗಳ ಅಪಹರಣದ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗುರುವಾರ (ಮೇ 29) ಆರೋಪಿಯು ಬಾಲಕಿಯೊಂದಿಗೆ ಮಂಗಳೂರಿಗೆ ವಾಪಸ್ ಬಂದಿರುವ ಮಾಹಿತಿಯನ್ನು ಪಡೆದ ಮೂಲ್ಕಿ ಪೊಲೀಸರು, ತಕ್ಷಣ ಕಾರ್ಯಾಚರಣೆ ನಡೆಸಿ ಪ್ರೀತಮ್‌ನನ್ನು ವಶಕ್ಕೆ ತೆಗೆದುಕೊಂಡರು.

ವಿಚಾರಣೆಯಲ್ಲಿ ಬಾಲಕಿ ಹೇಳಿದ್ದೇನು?
ವಿಚಾರಣೆಯ ಸಂದರ್ಭದಲ್ಲಿ ಬಾಲಕಿಯು ಆರೋಪಿ ಪ್ರೀತಮ್ ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ. ಈ ಆಧಾರದ ಮೇಲೆ ಮೂಲ್ಕಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *