Wed. Jun 4th, 2025

Ujire: ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಸಂಭ್ರಮ

ಉಜಿರೆ :(ಜೂ.02) ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ ಬೇಸಿಗೆ ರಜೆಯನ್ನು ಮುಗಿಸಿದ ವಿದ್ಯಾರ್ಥಿಗಳಿಗೆ 2025-26ನೇ ಶೈಕ್ಷಣಿಕ ಸಾಲಿನ ಮೊದಲನೇ ದಿನದ ಸಂಭ್ರಮ.

ಇದನ್ನೂ ಓದಿ: 🟣ಬಂದಾರು : ಮೈರೋಳ್ತಡ್ಕ ಸ.ಉ.ಪ್ರಾ.ಶಾಲಾ ಪ್ರಾರಂಭೋತ್ಸವ ಹಾಗೂ

ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸಂಯೋಜಕರಾದ ಡಾ. ಎಸ್.ಎನ್ ಕಾಕತ್ಕರ್ ಹಾಗೂ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ಧನ್ಯಕುಮಾರ್ ಇವರು ದೀಪ ಪ್ರಜ್ವಲಿಸಿ, “ಶಾಲಾ ದಿನಚರಿ 2025-26” ಪುಸ್ತಕ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆಯ ಶುಭನುಡಿಗಳೊಂದಿಗೆ ಶೈಕ್ಷಣಿಕ ವರ್ಷವನ್ನು ಶುಭಾರಂಭಗೊಳಿಸಿದರು.

ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ ಶಿಕ್ಷಕ ವೃಂದವು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಕಾಗದಗಳಿಂದ ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಒಂದನೇ ತರಗತಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆರತಿ ಬೆಳಗಿ ಶುಭಾಶಯ ಪತ್ರದೊಂದಿಗೆ ತಮ್ಮ ಶಾಲಾ ಜೀವನದ ಮೊದಲನೇ ದಿನಕ್ಕೆ ಸ್ವಾಗತಿಸಲಾಯಿತು.

Leave a Reply

Your email address will not be published. Required fields are marked *