Fri. Jun 6th, 2025

Belthangady: ಅಬ್ದುಲ್‌ ರಹಿಮಾನ್ ಹತ್ಯೆ ಪ್ರಕರಣ – ಆರೋಪಿಗಳಿಬ್ಬರನ್ನು ಬೆಳ್ತಂಗಡಿಗೆ ಕರೆತಂದು ಮಹಜರು ನಡೆಸಿದ ಪೋಲಿಸರು..!

ಬೆಳ್ತಂಗಡಿ :(ಜೂ.3) ಬಂಟ್ವಾಳ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ಸಂಬಂಧ ಕೊಲೆ ಮಾಡಿದ ಪ್ರಮುಖ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಸೋಮವಾರ ಸಂಜೆ ಪೊಲೀಸ್ ಭದ್ರತೆಯಲ್ಲಿ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಇದನ್ನೂ ಓದಿ: ⭕ಬೆಂಗಳೂರು : ಅಬ್ದುಲ್ ರೆಹಮಾನ್ ಘಟನೆ ನೆಪದಲ್ಲಿ ರಾಜ್ಯಾದ್ಯಂತ ಹಿಂದೂ ನಾಯಕರ ಧ್ವನಿ ಅಡಗಿಸುವ ಷಡ್ಯಂತ್ರ !


ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದೀಪಕ್(21) ಮತ್ತು ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ(27) ನನ್ನು ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಜೂ.2 ರಂದು ಬೆಳ್ತಂಗಡಿಯ ಗುರುವಾಯನಕೆರೆ ಅಂಗಡಿ, ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್ ಅಂಗಡಿ, ಬೆಳ್ತಂಗಡಿ ಮೂರು ಮಾರ್ಗದ ಬಳಿ, ಉಜಿರೆಯ ನಿಡಿಗಲ್ ನದಿಯ ಬಳಿ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.


ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದೀಪಕ್ ಮತ್ತು ಸುಮಿತ್ ಆಚಾರ್ಯ ರಹಿಮಾನ್ ಕೊಲೆ ಮಾಡಿದ ಬಳಿಕ ಬೈಕ್ ಮೂಲಕ ಬೆಳ್ತಂಗಡಿ ಕಡೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಅಂಗಡಿಯೊಂದರಲ್ಲಿ ಹೊಸ ರೈನ್ ಕೋಟ್ ಖರೀದಿ ಮಾಡಿ ಬೆಳ್ತಂಗಡಿಯ ಸಂತೆಕಟ್ಟೆ ಮೊಬೈಲ್ ಶಾಪ್ ಗೆ ಬಂದು ಸಿಮ್ ರಿಮೂವ್ ಮಾಡುವ ಇಜೆಕ್ಟರ್ ಪಡೆದುಕೊಂಡು ಆರೋಪಿಗಳು ತಮ್ಮ ಮೊಬೈಲ್ ನಿಂದ ಸಿಮ್ ತೆಗೆದು ಮೂರು ಮಾರ್ಗದ ಬಳಿಯ ಚರಂಡಿಗೆ ಸಿಮ್ ಬಿಸಾಕಿ ನೇರ ಕಲ್ಮಂಜ ಗ್ರಾಮದ ನಿಡಿಗಲ್ ನದಿಗೆ ತಮ್ಮ ಮೊಬೈಲ್ ಬಿಸಾಕಿ ಚಿಕ್ಕಮಗಳೂರು ಕಡೆ ಪರಾರಿಯಾಗಿದ್ದರು ಎನ್ನಲಾಗಿದೆ.


ಪೊಲೀಸರಿಗೆ ಆರೋಪಿಗಳು ಬಿಸಾಕಿದ ಸಿಮ್ ಹಾಗೂ ಮೊಬೈಲ್ ಪತ್ತೆಯಾಗಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *