Fri. Jun 6th, 2025

Belthangadi: ಕಾಲ್ತುಳಿತ ದುರಂತ: ಪೂರ್ವ ತಯಾರಿ ಇಲ್ಲದೆ ರಾಜ್ಯ ಸರ್ಕಾದಿಂದ ಬೇಜವಾಬ್ದಾರಿ ಸಂಭ್ರಮಾಚರಣೆ – ಹರೀಶ್ ಪೂಂಜ

ಬೆಳ್ತಂಗಡಿ (ಜೂ.5) : ಬೆಂಗಳೂರಿನಲ್ಲಿ ನಡೆದ ಭೀಕರ ಕಾಲ್ತುಳಿತ ಬಗ್ಗೆ ಬೆಳ್ತಂಗಡಿ ಶಾಸಕರು ಅತೀವ ದುಃಖ ವ್ಯಕ್ತಪಡಿಸಿದ್ದು ಈ ಘಟನೆ ನಿಜಕ್ಕೂ ಹೃದಯ ವಿದ್ರಾವಕ ಆಘಾತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭರತನಾಟ್ಯ ತರಗತಿಗಳು ಪ್ರಾರಂಭ​


ಯಾವುದೇ ಪೂರ್ವ ತಯಾರಿ ನಡೆಸದೆ ಸಂಬಂಧಪಟ್ಟ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾ ಏಕಿಯಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಭ್ರಮಾಚರಣೆ ಆಯೋಜಿಸಿದ್ದು ರಾಜ್ಯ ಸರ್ಕಾರದ ಬೇಜವಾಬ್ದಾರಿಯಾಗಿದ್ದು.

ಈ ದುರಂತದ ಹೊಣೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಹೊರಬೇಕೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *