Fri. Jun 6th, 2025

Puttur: ತಾಕತ್ತಿದ್ರೆ ಗಡಿಪಾರು ಮಾಡಿ ನೋಡಿ, ಒಮ್ಮೆ ಪುತ್ತಿಲರ ವಿಷಯಕ್ಕೆ ಬನ್ನಿ ನೋಡೋಣ ಎಂದ ಪುತ್ತೂರಿನ ಗಣೇಶ್‌ ವಿರುದ್ಧ ಪ್ರಕರಣ ದಾಖಲು

ಪುತ್ತೂರು:(ಜೂ.5) ಬಿಜೆಪಿ ಮುಖಂಡ ಅರುಣ್ ಪುತ್ತಿಲ ಗಡಿಪಾರು ಆದೇಶಕ್ಕೆ ಸಂಬಂಧಪಟ್ಟಂತೆ ವಿಡಿಯೋ ಬಿಡುಗಡೆ ಮಾಡಿದ್ದ ಪುತ್ತೂರಿನ ಗಣೇಶ್ ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: 🛑ಪುತ್ತೂರು: ಪುತ್ತೂರು ತಾಲೂಕಿನ ಆರು ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವಾರು ಮನೆಗಳಿಗೆ ಹಾನಿ​

ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಎಸ್ಪಿ ಹೇಳಿದ್ದೇನು..?
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವ್ಯಕ್ತಿಯೋರ್ವರ ಗಡಿಪಾರಿಗೆ ಸಂಬಂಧಿಸಿದ ವಿಚಾರದಲ್ಲಿ ವಾಟ್ಸ್ ಆಪ್ ಮೂಲಕ ಆರೋಪಿ ಗಣೇಶ್ ಪ್ರಸಾದ್ ವಾಸ: ಕಬಕ ಗ್ರಾಮ, ಪುತ್ತೂರು ಎಂಬಾತನು ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ಗಾಳಿ ಸುದ್ದಿಯನ್ನು ಹರಡುತ್ತಾ ಹಾಗೂ ಸ್ಥಳಿಯ ಆಡಳಿತಕ್ಕೆ ಭಯ ಹಾಗೂ ಅಪರಾಧಿಕ ಬೆದರಿಕೆಯನ್ನೊಡ್ಡಿರುವ ಕಾರಣ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಆರೋಪಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 41/2025 00:353(1), (b), 351(3) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *