ಉಜಿರೆ: ಅನುಗ್ರಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯು ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ ರವರ ಅಧ್ಯಕ್ಷತೆಯಲ್ಲಿ ಜರಗಿತು. ಶಾಲಾ ಪ್ರಾರ್ಥನೆಯ ಬಳಿಕ ಶಾಲಾ ಮಕ್ಕಳಿಂದ ಪರಿಸರ ಗೀತೆಗಳನ್ನು ಹಾಡಿಸಲಾಯಿತು.


ಇದನ್ನೂ ಓದಿ: ⭕ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ನಗರಸಭಾ ಸದಸ್ಯನ ಬೈಕ್ ಮೊಬೈಲ್ ಪತ್ತೆ
ತದನಂತರ ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಾದ ಹಿಭಾ ಫಾತಿಮ ಹಾಗೂ ಮಹಮ್ಮದ್ ರಯ್ಯಾನ್ ಮಾತನಾಡಿದರು.
ಸಾಂಕೇತಿಕವಾಗಿ ಗಿಡವನ್ನು ಪ್ರಾಂಶುಪಾಲರಿಗೆ ಅರ್ಪಿಸಲಾಯಿತು. ಪ್ರಾಂಶುಪಾಲರಾದ ಫಾ! ವಿಜಯ್ ಲೋಬೋರವರು ಪರಿಸರ ಉಳಿಸಿ, ಬೆಳೆಸಿ ರಕ್ಷಿಸಬೇಕೆಂಬ ಸಂದೇಶವನ್ನು ನೀಡಿದರು. ಪರಿಸರ ಜಾಗ್ರತಿಯ ಬಗ್ಗೆ ವಿದ್ಯಾರ್ಥಿಗಳಿಂದ ಭಿತ್ತಿ ಪತ್ರ ಪ್ರದರ್ಶನವನ್ನು ಆಯೋಜಿಸಲಾಯಿತು. ವಿದ್ಯಾರ್ಥಿನಿ ಜೆವಿಟಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಧನ್ಯವಾದವಿತ್ತರು.



