ಬೆಂಗಳೂರು :(ಜೂ.9) ಆಕೆಗೆ 36 ರ ವಯಸ್ಸು, ಈತನಿಗೆ 25 ವಯಸ್ಸು, ಇವರಿಬ್ಬರ ಮಧ್ಯೆ ಲವ್ವಿಡವ್ವಿ, ಆದರೆ ಆ ಪ್ರೀತಿ ಅಂತ್ಯವಾಗಿದ್ದು ಮಾತ್ರ ಕೊಲೆಯಲ್ಲಿ , ಏನಿದು ಘಟನೆ ಅಂತೀರಾ ಹಾಗಾದ್ರೆ ಮುಂದೆ ಓದಿ…

ಇದನ್ನೂ ಓದಿ: ⭕ಕಡಬ: ಅಣ್ಣನನ್ನು ಬೆನ್ನಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ತಮ್ಮ
ಬೆಂಗಳೂರಿನ ಓಯೋ ರೂಮ್ ನಲ್ಲಿ ಪ್ರಿಯಕರನೋರ್ವ ತನ್ನ ಪ್ರಿಯತಮೆಯನ್ನು ಬರ್ಬರವಾಗಿ ಕೊಚ್ಚಿ ಕೊಂದಿರುವ ಘಟನೆ ನಡೆದಿದೆ.
ಬೆಂಗಳೂರಿನ ಪೂರ್ಣ ಪ್ರಜ್ಞಾಲೇಔಟ್ ಹೋಟೆಲ್ ಓಯೋ ರೂಮ್ ನಲ್ಲಿ ಯಶಸ್ ಎಂಬಾತ ತನ್ನ ಪ್ರಿಯತಮೆ ಹರಿಣಿ ಎಂಬುವವಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.



ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯತಮೆ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಜೂನ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

