Raha Kapoor: ಸಿನಿಮಾ ನಟರಿಗೆ ಅದರಲ್ಲೂ ಯಶಸ್ವಿ ಸಿನಿಮಾ ಕುಟುಂಬಕ್ಕೆ ಸೇರಿದ ಹೊಸ ತಲೆಮಾರಿನವರಿಗೆ ಹಣ ಆಸ್ತಿ ಎಂಬುದು ಲೆಕ್ಕಕ್ಕಿಲ್ಲ. ತಂದೆ, ತಾತ ಅವರುಗಳು ದುಡಿದಿರುವ ಆಸ್ತಿ ಈಗ ನೂರಾರು ಕೋಟಿ ಮೌಲ್ಯದ್ದಾಗಿದ್ದು, ಆರಾಮವಾಗಿ ಕೂತುಂಡು ತಿಂದರೂ ಕರಗದಷ್ಟಿದೆ. ಹೀಗೆ ತಲೆಮಾರುಗಳಿಂದಲೂ ಸಿನಿಮಾ ರಂಗದಲ್ಲೇ ಇದ್ದು, ಸಿನಿಮಾ ನಂಬಿಕೊಂಡೇ ಸಾವಿರಾರು ಕೋಟಿ ಸಂಪಾದಿಸಿರುವ ಜೊತೆಗೆ ದೊಡ್ಡ ಹೆಸರು ಸಹ ಮಾಡಿರುವ ಕುಟುಂಬಗಳಲ್ಲಿ ಮೊದಲ ಸ್ಥಾನ ಕಪೂರ್ ಕುಟುಂಬದ್ದು.

ಇದನ್ನೂ ಓದಿ: ⭕ಉಡುಪಿ: ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಮೆಡಿಕಲ್ ಶಾಪ್ ನ ಯುವತಿಗೆ ಹಲ್ಲೆ ಮಾಡಿದ ಮುಸ್ಲಿಂ ಮಹಿಳೆ
ಪೃಥ್ವಿರಾಜ್ ಕಪೂರ್, ತ್ರಿಲೋಕ್ ಕಪೂರ್ ಅವರಿಂದ ಆರಂಭವಾದ ಕಪೂರ್ ಕಾಂದಾನಿನ ಸಿನಿಮಾ ಜರ್ನಿ ಈಗ ಐದನೇ ತಲೆಮಾರಿನಲ್ಲಿ ನಡೆಯುತ್ತಿದೆ. ರಣ್ಬೀರ್-ಆಲಿಯಾ ಮಗಳು ಈಗ ಕಪೂರ್ ಕುಟುಂಬದ ಐದನೇ ತಲೆಮಾರು. ಕಪೂರ್ ಕುಟುಂಬ ಬಾಲಿವುಡ್ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಮುಂಬೈ ಹಾಗೂ ಉತ್ತರ ಭಾರತದ ಇತರೆ ಕೆಲವು ನಗರಗಳಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಈ ಕುಟುಂಬದವರು ಹೊಂದಿದ್ದಾರೆ.

ಬಾಲಿವುಡ್ನ ಈಗಿನ ಸ್ಟಾರ್ ನಟ ರಣ್ಬೀರ್ ಕಪೂರ್, ಸ್ಟಾರ್ ನಟಿ ಆಲಿಯಾ ಭಟ್ರ ಪುತ್ರಿ ರಾಹಾ ಕಪೂರ್ಗೆ ಈಗಿನ್ನೂ ಎರಡು ವರ್ಷ ವಯಸ್ಸು. ಈಗಲೇ ರಾಹಾ ಕಪೂರ್ ಬರೋಬ್ಬರಿ 250 ಕೋಟಿ ರೂಪಾಯಿ ಆಸ್ತಿಯ ಮಾಲಕಿ! ಹೌದು, ರಣ್ಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ಬಾಂದ್ರಾದ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಅಲ್ಲಿ ಒಂದು ಬಲು ಐಶಾರಾಮಿಯಾದ ಮನೆ ನಿರ್ಮಾಣ ಮಾಡುತ್ತಿದ್ದಾರೆ.

ಕಳೆದ ಎರಡು ವರ್ಷದಿಂದಲೂ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಣ್ಬೀರ್ ಕಪೂರ್-ಆಲಿಯಾ ಸಹ ಆಗೊಮ್ಮೆ-ಈಗೊಮ್ಮೆ ನಿರ್ಮಾಣ ಹಂತದಲ್ಲಿರುವ ಮನೆಗೆ ಹೋಗಿ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಈ ಮನೆಯ ಒಟ್ಟು ಮೌಲ್ಯ ಸುಮಾರು 250 ಕೋಟಿ ರೂಪಾಯಿಗಳು ಎನ್ನಲಾಗಿದ್ದು, ಈ ಮನೆಯನ್ನು ಈಗಾಗಲೇ ಪುತ್ರಿ ರಾಹಾ ಹೆಸರಿಗೆ ಮಾಡಿದ್ದಾರಂತೆ ರಣ್ಬೀರ್ ಕಪೂರ್. ಮನೆ ನಿರ್ಮಾಣವನ್ನೂ ಸಹ ಮಗಳು ರಾಹಾ ಅನ್ನು ಮನಸ್ಸಲ್ಲಿಟ್ಟುಕೊಂಡು, ರಾಹಾಳ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗುತ್ತಿದೆಯಂತೆ.

ಈ ವರ್ಷದ ದೀಪಾವಳಿ ವೇಳೆಗೆ ಹೊಸ ಮನೆಗೆ ಶಿಫ್ಟ್ ಆಗುವ ಉದ್ದೇಶವನ್ನು ರಣ್ಬೀರ್ ಹಾಗೂ ಆಲಿಯಾ ಹೊಂದಿದ್ದು, ಈ ವರ್ಷದ ದೀಪಾವಳಿಯನ್ನು ಮಗಳೊಟ್ಟಿಗೆ ಹೊಸ ಮನೆಯಲ್ಲಿ ಆಚರಿಸಲಿದ್ದಾರೆ ರಣ್ಬೀರ್ ಕಪೂರ್ ಹಾಗೂ ಆಲಿಯಾ.

ರಣ್ಬೀರ್ ಹಾಗೂ ಆಲಿಯಾ ಇದೀಗ ಮುಂಬೈನ ಪಾಲಿ ಹಿಲ್ನ ವಾಸ್ತು ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಾರೆ. ಈ ಅಪಾರ್ಟ್ಮೆಂಟ್ ಸಹ ಬಲು ಐಶಾರಾಮಿ ಅಪಾರ್ಟ್ಮೆಂಟ್ ಆಗಿದ್ದು, ಈ ಮನೆಯಲ್ಲಿ ಅವರ ಕಾರುಗಳಿಗೂ ಲಿಫ್ಟ್ ಇದೆಯಂತೆ!
