Fri. Jun 13th, 2025

Ahmedabad Plane Crash: ಟೇಕ್ ಆಫ್ ಆಗುತ್ತಿದ್ದಂತೆ ಏರ್​ ಇಂಡಿಯಾ ವಿಮಾನ ಪತನ

Ahmedabad Plane Crash: ಗುಜರಾತ್​ನ ಅಹಮದಾಬಾದ್​​ನಲ್ಲಿ ಬೋಯಿಂಗ್ 787-8 ವಿಮಾನ ಪತನವಾಗಿದೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು ಎಂದು ಅಹಮದಾಬಾದ್​​ ಪೊಲೀಸರು ಮಾಹಿತಿ ನೀಡಿದ್ದಾರೆ.

ಟೇಕಾಫ್​ ಆದ ಕೆಲವೇ ಹೊತ್ತಿನಲ್ಲಿ ವಿಮಾನ ಪತನವಾಗಿದೆ. ಏರ್​ ಇಂಡಿಯಾ ವಿಮಾನ ಅಹಮದಾಬಾದ್​ನಿಂದ ಲಂಡನ್​ಗೆ ತೆರಳುತ್ತಿತ್ತು. ಗಾಯಾಳುಗಳನ್ನು ಅಹಮದಾಬಾದ್​ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಘಾನಿ ನಗರದ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ.​​ ಏಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *