ಬೆಳ್ತಂಗಡಿ: (ಜೂ.13) ಗಣೇಶ್ ವೈದ್ಯಕೀಯ ಮತ್ತು ಅಪಘಾತ ಚಿಕಿತ್ಸಾ ಕೇಂದ್ರ 11 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಉಚಿತ ಯೋಗ ಶಿಬಿರವು ಜೂ.16 ರಿಂದ ಜೂ.21 ರವರೆಗೆ ಸಂಜೆ 5:00 ರಿಂದ 6:00 ರ ತನಕ ಬೆಳ್ತಂಗಡಿಯ ಬಸ್ ಸ್ಟ್ಯಾಂಡ್ ಎದುರು ಅಪೋಲೋ ಮೆಡಿಕಲ್ ಬಳಿ ಗಣೇಶ್ ವೈದ್ಯಕೀಯ ಮತ್ತು ಅಪಘಾತ ಚಿಕಿತ್ಸಾ ಕೇಂದ್ರದಲ್ಲಿ ನಡೆಯಲಿದೆ.

ಇದನ್ನೂ ಓದಿ: ⭕ಮದುವೆ ಬಳಿಕ ಮೊದಲ ಬಾರಿ ಪತಿಯ ಭೇಟಿಗೆ ವಿಮಾನ ಹತ್ತಿದ ನವವಧು ಸೇರಿದ್ದು ಮಾತ್ರ ಮಸಣಕ್ಕೆ
ವಿಶೇಷ ಸೂಚನೆಗಳು:
- ದಪ್ಪನೆಯ ಜಮಾಖಾನ ಅತೀ ಅವಶ್ಯ
- ಹಗುರವಾದ ಸಡಿಲವಾದ ತೆಳ್ಳನೆಯ ಬಟ್ಟೆಯನ್ನು ಧರಿಸಬೇಕು
- ಶಿಬಿರಕ್ಕೆ ಖಾಲಿ ಹೊಟ್ಟೆಯಲ್ಲಿ ಬರಬೇಕು
- ಶಿಬಿರಕ್ಕೆ ಹತ್ತು ನಿಮಿಷ ಮುಂಚಿತವಾಗಿ ಬರಬೇಕು


ದೇಹದ ಅತೀ ತೂಕ, ಮಂಡಿನೋವು, ಮೈಗ್ರೇನ್, ಮಲಬದ್ಧತೆ, ಮಧುಮೇಹ, ಬೆನ್ನುನೋವು, ಅಸ್ತಮ, ಉದರ ಸಂಬಂಧಿ ರೋಗಗಳು, ಅಧಿಕ ರಕ್ತದೊತ್ತಡ, ಸಂಧಿವಾತ, ಕಣ್ಣಿನ ಸಮಸ್ಯೆಗಳನ್ನು ಯಾವುದೇ ಔಷಧೋಪಚಾರವಿಲ್ಲದೆ ಯೋಗಾಭ್ಯಾಸದ ಮೂಲಕ ನಿವಾರಣೆಗೊಳಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480953331 / 9448437952


