Sat. Jun 14th, 2025

SDM English Medium: ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

ಉಜಿರೆ: (ಜೂ.13) ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಉಜಿರೆಯಲ್ಲಿ ಜೂನ್ 13 ರಂದು ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ ನಡೆಯಿತು.

ಇದನ್ನೂ ಓದಿ: 🟣ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಯೋಗ ತರಬೇತಿ ಉದ್ಘಾಟನೆ

ಶಾಲಾ ವಿದ್ಯಾರ್ಥಿಗಳು ಶಾಲಾ ನಾಯಕನಾಗಿ ಸಿಯೋನ್ ರಾಜ್ ಹಾಗೂ ಶಾಲಾ ಉಪ ನಾಯಕನಾಗಿ ಅತುಲ್ಯ ತೇಜ ಇವರನ್ನು ಆಯ್ಕೆ ಮಾಡಿರುತ್ತಾರೆ.


ಇನ್ನುಳಿದಂತೆ ಶಿಕ್ಷಣ ಮಂತ್ರಿಯಾಗಿ ತ್ರಿಜಲ್, ನೀರಾವರಿ ಮಂತ್ರಿ ಧ್ರುವ, ಸಾಂಸ್ಕೃತಿಕ ಮಂತ್ರಿ ಅಲ್ರಿಕ್, ಆರೋಗ್ಯ ಮಂತ್ರಿ ಧನ್ವಿತ್, ಕ್ರೀಡಾ ಮಂತ್ರಿ ಆರುಷ್, ಶಿಸ್ತು ಮಂತ್ರಿಯಾಗಿ ಸನ್ವಿತ್ ಇವರನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿರುತ್ತಾರೆ.

ಆಯ್ಕೆಗೊಂಡ ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನು ಹಾಗೂ ಪ್ರತಿ ಸ್ಪರ್ಧಿಗಳನ್ನು ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.

Leave a Reply

Your email address will not be published. Required fields are marked *