Sat. Jun 14th, 2025

Belthangady: ಸ್ಟಾರ್ ಲೈನ್ ಶಾಲಾ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ

ಬೆಳ್ತಂಗಡಿ:(ಜೂ.14) ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2025 -26 ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಇವರ ಮಾರ್ಗದರ್ಶನದಲ್ಲಿ ಶಾಲಾ ಸಹ ಶಿಕ್ಷಕರ ಸಹಯೋಗದೊಂದಿಗೆ ಬಹಳ ಅರ್ಥಪೂರ್ಣವಾಗಿ ನಡೆಯಿತು.

ಇದನ್ನೂ ಓದಿ: 📚ಬೆಳಾಲು: ಉಜಿರೆ ಪ್ರಭಾತ್ ಸಂಸ್ಥೆ ವತಿಯಿಂದ ಪೆರಿಯಡ್ಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ವಿದ್ಯಾರ್ಥಿಗಳು ಕೆಲವು ದಿನಗಳಿಂದ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದು, ಕಣದಲ್ಲಿದ್ದ ಸ್ಪರ್ಧಿಗಳ ಭವಿಷ್ಯ ಇಂದು ನಿರ್ಧಾರವಾಯಿತು. ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕರುಗಳಿಗೆ ಮತ ಚಲಾಯಿಸಿದರು.

ಅಂತಿಮವಾಗಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಮೊಹಮ್ಮದ್ ಶುಹೈಬ್, ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ಜಲಾಲುದ್ದಿನ್ ಮುನಾವರ್, ಶಿಕ್ಷಣ ಮಂತ್ರಿಯಾಗಿ ಮೊಹಮ್ಮದ್ ಮಾಝಿನ್, ಸಾಂಸ್ಕೃತಿಕ ಮಂತ್ರಿಯಾಗಿ ಶಾಕಿಬುಲ್ ಹಸನ್,ಆರೋಗ್ಯ ಮಂತ್ರಿಯಾಗಿ ಫಾತಿಮತ್ ಫಾಯಿಝ, ಶಿಸ್ತು ಮಂತ್ರಿಯಾಗಿ ಮೊಹಮ್ಮದ್ ಜಾಫರ್, ಪುಸ್ತಕಾಲಯದ ಮಂತ್ರಿಯಾಗಿ ಝೋಯ ಬಾನು, ಸ್ವಚ್ಛತಾ ಮಂತ್ರಿಯಾಗಿ ಅಫ್ರಿನ್ ಮರಿಯಂ ಆಯ್ಕೆಯಾದರು. ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯು ಎಲ್ಲರ ಗಮನ ಸೆಳೆಯಿತು.

ಶಾಲಾ ಮುಖ್ಯ ಉಪಾಧ್ಯಾಯಿನಿ ಶ್ರೀ ಮತಿ ಜಾಕಿನ್ ಬಿನ್ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಅವರವರ ಕರ್ತವ್ಯಗಳನ್ನು ನೆನಪಿಸಿದರು ಮತ್ತು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ನಾಯಕರುಗಳು ಶಾಲೆಯ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *