ಪುತ್ತೂರು: (ಜೂ.16) 7 ತಿಂಗಳ ಗರ್ಭಿಣಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ಜೂ.15 ರ ರಾತ್ರಿ ನಡೆದಿದೆ.

ಚಿಕ್ಕಪುತ್ತೂರು ನಿವಾಸಿ ಚಿಂತನ್ ಎಂಬವರ ಪತ್ನಿ ರೇಷ್ಮಾ ಮೃತ ಮಹಿಳೆ.
ಪುತ್ತೂರು ಕಸಬಾದ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ಚಿಂತನ್, ಅವರ ಪತ್ನಿ ಹಾಗು ಪುತ್ರಿ ವಾಸ್ತವ್ಯ ಹೊಂದಿದ್ದರು. 4 ವರ್ಷಗಳ ಹಿಂದೆಯಷ್ಟೆ ಚಿಂತನ್ ಅವರ ವಿವಾಹ ಸುರತ್ಕಲ್ ನ. ರೇಷ್ಮಾ ಅವರ ಜೊತೆ ನಡೆದಿತ್ತು.
ಜೂ.15 ರ ರಾತ್ರಿ ರೇಷ್ಮಾ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.


ಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ ಮಾಹಿತಿ ಪಡೆದಿದ್ದಾರೆ. ಮೃತರು ಗಂಡ ಚಿಂತನ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


