ಉಜಿರೆ: (ಜೂ.16). ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಕಿಂಡರ್ಗಾರ್ಟನ್ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ಗ್ರೀನ್ ಡೇ” ಆಚರಿಸಲಾಯಿತು.


ಇದನ್ನೂ ಓದಿ: 🟣ಉಜಿರೆ : ಎಸ್ ಡಿ ಎಂ ಪ. ಪೂ. ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರ
ಕಿಂಡರ್ಗಾರ್ಟನ್ ನ ಶಿಕ್ಷಕಿಯರು ಹಾಗೂ ಪುಟಾಣಿಗಳು ಸೇರಿ “ಸೇವ್ ಟ್ರೀ, ಸೇವ್ ಅರ್ಥ್ ಎಂಬ ಕಿರು ಪ್ರಹಸನವನ್ನು ಪ್ರದರ್ಶಿಸಿದರು. ಶಿಕ್ಷಕಿ ವಿಜಯಲಕ್ಶ್ಮಿ. ಬಿ ಕಟ್ಟಿ ಪರಿಸರದ ಕುರಿತು ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಸ್ಮ್ರತಿ ಜೈನ್ ಸ್ವಾಗತ ಭಾಷಣ ಮಾಡಿದರು.

