Tue. Jun 17th, 2025

Belal : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ & ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮನಶ್ರೀ ಗೆ ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ವತಿಯಿಂದ ಅಭಿನಂದನೆ

ಬೆಳಾಲು :(ಜೂ.17) ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬಿಜೆಪಿಯ ಸಕ್ರೀಯ ಕಾರ್ಯಕರ್ತ,

ಇದನ್ನೂ ಓದಿ: ⭕ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಂಡದಲ್ಲಿ ಪತ್ತೆ

ಜಿಲ್ಲಾ ಕಾರ್ಯದರ್ಶಿ ಶ್ರೀ ಸೀತಾರಾಮ ಬಿ.ಎಸ್ ಮತ್ತು ಶ್ರೀಮತಿ ಯಶೋಧ ದಂಪತಿಗಳ ಪುತ್ರಿ ಕು.ಮನಶ್ರೀ ಇವರನ್ನು ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ವತಿಯಿಂದ ಅಭಿನಂದಿಸಲಾಯಿತು‌.


ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹಸಂಚಾಲಕ ಸಂದೀಪ್ ರೈ ಧರ್ಮಸ್ಥಳ, ಸಮಿತಿ ಸದಸ್ಯರಾದ ಅಜಿತ್ ಕುತ್ಲೂರು, ಕಿಶೋರ್ ಶಿರ್ಲಾಲ್, ಸನತ್ ನಾಲ್ಕೂರು, ಯೋಗೀಶ್ ಗೌಡ ಕಾಯರ್ತಡ್ಕ, ಲೋಕೇಶ್ ಬೆಳಾಲು ಹಾಗೂ ಮನೆಯವರು ಉಪಸ್ಥಿತರಿದ್ದರು
.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು